Kannada NewsLatest

ಯಕ್ಸಂಬಾ ಪಟ್ಟಣದಲ್ಲಿ ಕಟ್ಟಡ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ

ಪ್ರಗತಿವಾಹಿನಿ ಸುದ್ದಿ; ಯಕ್ಸಂಬಾ: ಪಟ್ಟಣದ ಶಿವಶಂಕರ ಕನ್ನಡ ಶಾಲಾ ಆವರಣದಲ್ಲಿ ಆಯೋಜಿಸಿದ ಕೋವಿಡ್-19 ಪರಿಹಾರಾರ್ಥವಾಗಿ ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆ ವತಿಯಿಂದ ಲೋಕ ಕಲ್ಯಾಣ ಕಟ್ಟಡ ಕಾರ್ಮಿಕರ ಸಂಘ ಯಕ್ಸಂಬಾ ಇದರ ಅಡಿಯಲ್ಲಿ ಜೊಲ್ಲೆ ಉದ್ಯೋಗ ಸಮೂಹದಿಂದ ಕಟ್ಟಡ ಕಾರ್ಮಿಕರಿಗೆ ಹಾಗೂ ಹಿಂದೂಳಿದವರಿಗೆ ಆಹಾರದ ಕಿಟ್ ವಿತರಿಸಲಾಯಿತು.

ಬೀರೇಶ್ವರ ಸಂಸ್ಥೆಯ ಅಧ್ಯಕ್ಷ ಜಯಾನಂದ ಜಾಧವ ಮಾತನಾಡಿ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಇವರ ವಿಶೇಷ ಪ್ರಯತ್ನದಿಂದ ಯಕ್ಸಂಬಾ ಪಟ್ಟಣದಲ್ಲಿ 509 ಕಿಟ್ ಗಳನ್ನು ವಿತರಿಸಲಾಗಿದೆ.

Home add -Advt

ಈ ಸಂದರ್ಭದಲ್ಲಿ ಬೀರೇಶ್ವರ ಸಂಸ್ಥೆಯ ಅಧ್ಯಕ್ಷ ಜಯಾನಂದ ಜಾಧವ, ನಿರ್ದೇಶಕರಾದ ಅಪ್ಪಾಸಾಹೇಬ ಜೊಲ್ಲೆ, ಜ್ಯೋತಿ ಸಂಸ್ಥೆಯ ಅಧ್ಯಕರಾದ ಚಂದ್ರಕಾಂತ ಖೋತ, ನಿರ್ದೇಶಕರಾದ ಕಲ್ಲಪ್ಪ ಜಾಧವ, ಜ್ಯೋತಿ ಗಿಡ್ಡ,ಎಣ್ಣೆ ಬೀಜ ಬೆಳೆಗಾರರ ಸಂಘದ ಅಧ್ಯಕ್ಷ ಲಕ್ಷ್ಮಮಣ ಕಬಾಡೆ, ನಿರ್ದೇಶಕರಾದ ಅನ್ವರ ದಾಡಿವಾಲೆ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಶ್ರೀದೇವಿ ಮಠಪತಿ, ಸದಸ್ಯರಾದ ಮತಾಬ ಮಂಕಾದಾರ, ಮನೋಹರ ಕುಪ್ಪಾನಟ್ಟಿ, ಹಾಗೂ ಪಕ್ಷದ ಕಾರ್ಯಕರ್ತರು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.
ಅಥಣಿಯಿಂದ ಬಿಜಾಪುರದವರೆಗೆ ರಸ್ತೆ ಅಭಿವೃದ್ಧಿ: 497 ಕೋಟಿ ರೂ ಬಿಡುಗಡೆ

Related Articles

Back to top button