*ಬೆಳಗಾವಿ: ಗಾದಿ ತಯಾರಿಸುವ ಕಾರ್ಖಾನೆಯಲ್ಲಿ ಬೆಂಕಿ ಅವಘಡ*
ಪ್ರಗತಿವಾಹಿನಿ ಸುದ್ದಿ : ಗಾದಿ ತಯಾರಿಸುವ ಕಾರ್ಖಾನೆಗೆ ಆಕಸ್ಮಿಕವಾಗಿ ಬೆಂಕಿ ಹತ್ತಿದ ಪರಿಣಾಮ ಗೊಡಾವನದಲ್ಲಿದ್ದ ಹತ್ತಿ, ಮಶಿನಗಳು ಸುಟ್ಟು ಬಸ್ಮವಾದ ಘಟನೆ ಗೋಕಾಕ ತಾಲೂಕಿನ ಮಾಣಿಕವಾಡಿಯಲ್ಲಿ ನಡೆದಿದೆ.
ಇಂದು ಸಂಜೆ 5 ಗಂಟೆಗೆ ಹತ್ತಿದ ಆಕಸ್ಮಿಕ ಬೆಂಕಿ ಕೆಲವೆ ಕ್ಷಣಗಳಲ್ಲಿ ಇಡಿ ಗೊಡೌನ್ ಗೆ ಆವರಿಸಿ ಸುತ್ತಲೂ ಬೆಂಕಿ ಹೊತ್ತಿಕೊಂಡಿದೆ, ಸುದ್ದಿ ತಿಳಿದ ತಕ್ಷಣ ಗೋಕಾಕ ಗ್ರಾಮೀಣ ಪಿ,ಎಸ್,ಐ ಕಿರಣ ಮೊಹಿತೆಯವರು ಅಗ್ನಿ ಶ್ಯಾಮಕ ದಳವರಿಗೆ ಕರೆ ಮಾಡಿದ್ದಾರೆ. ಮಾಣಿಕವಾಡಿಯ ರಹವಾಸಿ ಮಲಿಕ ಮಾಣಿಕಸಾಬ ಬೊಜಗಾರ ಇವರ ಮಾಲಿಕತ್ವವದ ಹತ್ತಿಯ ಕಾರ್ಖಾನೆಯ ಗೊಡಾನ ಎಂದು ತಿಳಿದು ಬಂದಿದ್ದು ಅಂದಾಜು 10 ಲಕ್ಷ ರೂ ನಷ್ಟ ವಾಗಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಆಗಮಿಸಿದ ಗೋಕಾಕ ಅಗ್ನಶಾಮಕ ದಳದವರು ಹತ್ತಿದ ಬೆಂಕಿಯನ್ಮು ನಿಂದಿಸಲು ಹರಸಾಹಸ ಪಡುತಿದ್ದಾರೆ, ಇನ್ನು ಬೆಂಕಿಗೆ ಹೆದರಿ ಗೊಡಾನ್ ಸುತ್ತಮುತ್ತ ಇರುವ ಸಾರ್ವಜನಿಕರು ತಮ್ಮ ಮನೆಯಲ್ಲಿದ್ದ ಸಾಮಾನುಗಳನ್ನು ಹೊರಗಡೆ ತಂದಿಟ್ಟು ಕೊಳ್ಳುತಿದ್ದಾರೆ. ಬೆಂಕಿ ನಂದಿಸಲು ಒಂದು ಅಗ್ನಿಶಾಮಕ ವಾಹನದಿಂದ ಸಾದ್ಯವಾಗದ ಕಾರಣ ಪಿಎಸ,ಐ, ಕಿರಣ ಮೊಹಿತೆಯವರು ಪಕ್ಕದ ತಾಲೂಕಿಗೆ ಕರೆ ಮಾಡಿ ಪರ್ಯಾಯ ವ್ಯವಸ್ಥೆ ಮಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ