ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಡ್ರೀಮ್ 11 ಆನ್ ಲೈನ್ ಗೇಮ್ ಆಡಿ ಕೋಟ್ಯಂತರ ರೂಪಾಯಿ ಹಣ ಸಂಪಾದಿಸಬಹುದು ಎಂದು ಆಮಿಷವೊಡ್ಡಿ ವಂಚಿಸುತ್ತಿದ್ದ ಪ್ರಕರಣ ಸಂಬಂಧ ಡ್ರೀಮ್ ಗೇಮ್ ಆಪ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಮಂಜುನಾಥ್ ಎಂಬುವವರು ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಡ್ರೀಮ್ ಆನ್ ಲೈನ್ ಗೇಮ್ ವಿರುದ್ಧ ಪ್ರಕರಣ ದಾಖಲಾಗಿದೆ.
ಡ್ರೀಮ್ ಆನ್ ಲೈನ್ ಗೇಮ್ ಸಂಸ್ಥಾಪಕ ಹಾಗೂ ನಿರ್ದೇಶಕ ಭವಿತ್ ಸೇತ್ ಹಾಗೂ ಹರೀಶ್ ಜೈನ್ ಎಂಬುವವರು ಜನರಿಗೆ ಆನ್ ಲೈನ್ ಗೇಮ್ ಮೂಲಕ ಹಣ ಸಂಪಾದಿಸಬಹುದು ಎಂದು ಪ್ರಚೋದಿಸಿ, ಹಲವರನ್ನು ವಂಚಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ರಾಜ್ಯ ಸರ್ಕಾರ ಕೂಡ ಆನ್ ಲೈನ್ ಗೇಮ್ ನಿಷೇಧಿಸಲು ಮುಂದಾಗಿದ್ದು, ಇದೀಗ ದೂರಿನ ಹಿನ್ನೆಲೆಯಲ್ಲಿ ಅನ್ನಪೂರ್ಣ ನಗರ ಠಾಣೆ ಪೊಲಿಸರು ಕರ್ನಾಟಕ ಪೊಲೀಸ್ ಆಕ್ಟ್ 2021ರ ಪ್ರಕಾರ ಭವಿತ್ ಸೇತ್ ಹಾಗೂ ಹರೀಶ್ ಜೈನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಇನ್ನೋರ್ವ ಶಾಕರ ಮನೆ ಮೇಲೆ ಕಲ್ಲು ತೂರಾಟ; 8 ಕಾರುಗಳ ಗಾಜು ಪುಡಿ ಪುಡಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ