Film & EntertainmentKannada NewsKarnataka NewsNational

ಸಲ್ಮಾನ್‌ ಖಾನ್ ಅವರ ಗ್ಯಾಲಕ್ಸಿ ಅಪಾರ್ಟೆಂಟ್ ಮುಂದೆ ಫೈರಿಂಗ್

ಪ್ರಗತಿವಾಹಿನಿ ಸುದ್ದಿ: ಭಾನುವಾರ ಬೆಳಗಿನ ಜಾವ ಇಬ್ಬರು ಅಪರಿಚಿತರು ವ್ಯಕ್ತಿಗಳು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟೆಂಟ್ ಹೊರಗೆ ನಾಲ್ಕು ಸುತ್ತಿನ ಗುಂಡಿನ ದಾಳಿ ನಡೆಸಿದ್ದು, ಕೆಲ ಕಾಲ ಭಯದ ವಾತಾವರಣ ನಿರ್ಮಾಣ ಆಗಿದೆ.

ಬಾಂದ್ರಾದಲ್ಲಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆ ಮುಂದೆ ಮುಂಜಾನೆ 5ಗಂಟೆಗೆ ಗುಂಡಿನ ದಾಳಿ ನಡೆದಿದೆ. ಇಬ್ಬರು ಶೂಟರ್‌ಗಳು ಬೈಕ್‌ನಲ್ಲಿ ಬಂದು ನಾಲ್ಕು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. 

ಘಟನೆ ನಡೆದ ತಕ್ಷಣ ಸಲ್ಮಾನ್ ಖಾನ್ ನಿವಾಸಕ್ಕೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ರಸ್ತೆಯ ಎರಡೂ ಬದಿಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. 

ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಟೊಯ್ ಹತ್ಯೆ ಮಾಡಬೇಕೆಂದಿರುವ ಟಾಪ್ 10 ವ್ಯಕ್ತಿಗಳಲ್ಲಿ ನಟ ಸನ್ಮಾನ್ ಖಾನ್ ಕೂಡ ಸೇರಿದ್ದಾರೆ ಎನ್ನಾಲಾಗಿದೆ. ಲಾರೆನ್ಸ್ ಬಿಷ್ಟೊಯ್ ಗ್ಯಾಂಗ್ ದವರೇ ಗುಂಡಿನ ದಾಳಿ ನಡೆಸಿದ್ದಾರೆಯೇ ಎಂದು ಇನ್ನೂ ಖಚಿತವಾಗಿಲ್ಲ.‌

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button