
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನಿಯತಿ ಕೋ ಆಪರೇಟಿವ್ ಸೊಸೈಟಿಯ ಮೊದಲ ವಾರ್ಷಿಕ ಸಾಮಾನ್ಯ ಸಭೆ ನಡೆಯಿತು.
ಮುಖ್ಯ ಪ್ರವರ್ತಕರಾದ ಡಾ.ಸೋನಾಲಿ ಸರ್ನೋಬತ್ ಅವರು, ಒಂದು ವರ್ಷದ ಕಾರ್ಯಚಟುವಟಿಕೆಗಳನ್ನು ವಿವರಿಸಿ, ಶೀಘ್ರದಲ್ಲಿಯೇ ಹೊಸ ಶಾಖೆಯನ್ನು ತೆರೆಯುವುದಾಗಿ ಘೋಷಿಸಿದರು. ಅಧ್ಯಕ್ಷ ರೋಹನ್ ಜುವಳಿ ಹೊಸ ಯೋಜನೆಗಳನ್ನು ವಿವರಿಸಿದರು.
ವೈಜನಾಥ ಬಿರ್ಜೆ, ದೇವರಾಜ್ ಕೊಂಕಣೆ ಮತ್ತು ಅನುಷಾ ಜೋಶಿ ಅವರು ಲೆಕ್ಕ ಪತ್ರ ಮಂಡಿಸಿದರು, ಹಾಜರಿದ್ದ ಸದಸ್ಯರು ಕೆಲವು ಸಲಹೆಗಳನ್ನು ನೀಡಿದರು. ನಿರ್ದೇಶಕರು, ಸಲಹೆಗಾರರು, ಹಿತೈಷಿಗಳು ಭಾಗವಹಿಸಿದ್ದರು.
ಕಿಶೋರ್ ಕಾಕಡೆ ಪ್ರಾರ್ಥನೆ ಹಾಡಿದರು. ಉಪಾಧ್ಯಕ್ಷ ಡಾ.ಸಮೀರ್ ಸರ್ನೋಬತ್ ಅವರು ಸ್ವಾಗತಿಸಿದರು. ನ್ಯಾಯವಾದಿ ಭಾಸ್ಕರ್ ಪಾಟೀಲ್ ಕೃತಜ್ಞತೆ ಸಲ್ಲಿಸಿದರು.
ಗ್ರಾಮಸ್ಥರ ಸಂಕಷ್ಟಕ್ಕೆ ಸ್ಪಂದಿಸಿದ ಸೋನಾಲಿ ಸರ್ನೋಬತ್: ತಾವೇ ನಿಂತು ರೇಶನ್ ಹಂಚಿದ ಡಾಕ್ಟರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ