Kannada News

ಬಾಡೂಟ: ಬೆಳಗಾವಿಯಲ್ಲಿ ಮೊದಲ ಪ್ರಕರಣ ದಾಖಲು; ಇಬ್ಬರ ವಿರುದ್ಧ FIR

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 2023ರಲ್ಲಿ ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗದಿಂದ ಎಲ್ಲ ರಾಜಕೀಯ ಪಕ್ಷಗಳ ಸಭೆಯನ್ನು ಜರುಗಿಸಿ, ಪತ್ರಿಕಾಗೋಷ್ಠಿ ಮೂಲಕ ರಾಜಕೀಯ ಪಕ್ಷಗಳು ಸಾರ್ವಜನಿಕರು, ಚುನವಾಣೆಗೆ ಸ್ಪರ್ಧಿಸಲಿರುವ ಸಂಭಾವ್ಯ ಅಭ್ಯರ್ಥಿಗಳು ಹಾಗೂ ಇತರರು ಪಾಲಿಸಬೇಕಾದ ಚುನಾವಣಾ ನೀತಿ ಸಂಹಿತೆಗಳ ಕುರಿತು ಈಗಾಗಲೇ ತಿಳಿಸಲಾಗಿದೆ.

ಹೀಗಿರುವಾಗ, ಬೆಳಗಾವಿ ಜಿಲ್ಲೆ, ಬೆಳಗಾವಿ ತಾಲೂಕಿನಲ್ಲಿ ಒಳಪಡುವ ಬೆಳಗಾವಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರದಲ್ಲಿನ ಸಂತಿ ಬಸ್ತವಾಡ ಗ್ರಾಮದಲ್ಲಿ ದಿನಾಂಕ: 15.03.2023ರಂದು ರಾತ್ರಿ 09ಕ್ಕೆ ಎಸ್ಸಿ/ಎಸ್ಪಿ ಸಮಾವೇಶದ ಹೆಸರಿನಲ್ಲಿ, ಮತದಾರರಿಗೆ ಆಮಿಷ ಒಡ್ಡುವ ಉದ್ದೇಶದಿಂದ, ಸುಮಾರು 3000 ಜನರನ್ನು ಸೇರಿಸಿದ್ದಾರೆ ಎಂಬ ದೂರು ಸ್ವೀಕೃತವಾದ ಮೇರೆಗೆ ಚುನಾವಣಾ ಫ್ಲೈಯಿಂಗ್ ಸ್ಕ್ಯಾಡ್ ತಂಡವು ದಾಳಿ ಮಾಡಿದ್ದು, ಮಾಂಸಾಹಾರಿ ಊಟದ ವ್ಯವಸ್ಥೆಯನ್ನು ಮಾಡಿರುವುದು ಕಂಡುಬಂದ ಮೇರೆಗೆ ಅಡುಗೆಗೆ ಬಳಸಲಾದ ಪಾತ್ರೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಚುನಾವಣಾ ಆಯೋಗದ ಸೂಚನೆ ಉಲ್ಲಂಘಿಸಿದ ಆರೋಪದ ಮೇರೆಗೆ, ನಾಗೇಂದ್ರ ಬಾಳಪ್ಪ ನಾಯಿಕ, ಸಾಕೀನ್: ಸಂತಿಬಸ್ತವಾಡ ಮತ್ತು ನಾಗೇಶ ಮನ್ನೋಳಕರ ಮತ್ತು ಇತರರ ವಿರುದ್ಧ ಪ್ರಥಮ ವರ್ತಮಾನ ವರದಿ (FIR) ನಂ.54/2023 ಫಿರ್ಯಾದಿಯನ್ನು ಫ್ಲಾಯಿಂಗ್‌ ಸ್ಕ್ಯಾಡ್‌ದವರು ದಾಖಲಿಸಿದ್ದಾರೆ.

ಇದು ಬೆಳಗಾವಿಯಲ್ಲಿ ಈ ಬಾರಿ ದಾಖಲಾದ ಮೊದ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣವಾಗಿದೆ.

Home add -Advt

Related Articles

Back to top button