ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ವರ್ಲ್ಡ್ ಫೋರಮ್ ಫಾರ್ ಆರ್ಟ್ ಅಂಡ್ ಕಲ್ಚರ್ (WFAC ) ನೀಡುವ ಮೊದಲ ಜಾಂಕೃತಿ ಪ್ರಶಸ್ತಿಗಳನ್ನು ಅಖಿಲ ಭಾರತದ ಜಾಂಕೃತಿಯ ನೃತ್ಯ (ನೃತ್ಯ), ವಾದ್ಯಸಂಗೀತ (ವಾದನ), ಮತ್ತು ಗಾಯನ ವಿಭಾಗಗಳ 85 ಸಾಧಕರಿಗೆ ಪ್ರದಾನ ಮಾಡಲಾಯಿತು.
ಪ್ರಶಸ್ತಿಗಳನ್ನು ಮೂರು ಪ್ರತ್ಯೇಕ ವಯೋಮಾನದ ಗುಂಪುಗಳಲ್ಲಿ ವಿಭಾಗಿಸಲಾಗಿದೆ. 8 ವರ್ಷಕ್ಕಿಂತ ಕಡಿಮೆ, 8 ರಿಂದ 16 ವರ್ಷಗಳು ಮತ್ತು 17 ರಿಂದ 25 ವರ್ಷಗಳ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗಿದೆ.
ಗುರುದೇವ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, “ಯುವ ಜನತೆ ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ನೃತ್ಯದಿಂದ ದೂರ ಸರಿಯುತ್ತಿರುವುದನ್ನು ಗಮನಿಸಿ ನಮ್ಮ ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ವೇದಿಕೆಯನ್ನು ಅಸ್ತಿತ್ವಕ್ಕೆ ತರಲಾಯಿತು. ಇದರ ಮುಖಾಂತರ ಕಲೆ, ಸಂಸ್ಕೃತಿ ಉಳಿಸುವ ಕೆಲಸ ಮಾಡಲಾಗುತ್ತಿದೆ” ಎಂದರು.
ಕಾರ್ಯಕ್ರಮದಲ್ಲಿ ಜಿ. ಕಿಶನ್ ರೆಡ್ಡಿ ಜಿ. (ಭಾರತದ ಈಶಾನ್ಯ ಪ್ರದೇಶದ ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಅಭಿವೃದ್ಧಿ ಸಚಿವರು), ಮೀನಾಕ್ಷಿ ಲೇಖಿ (ವಿದೇಶಾಂಗ ವ್ಯವಹಾರಗಳು ಮತ್ತು ಸಂಸ್ಕೃತಿ ರಾಜ್ಯ ಸಚಿವರು), ರಾಜ್‌ಕುಮಾರ್ ರಂಜನ್ ಸಿಂಗ್ (ಶಿಕ್ಷಣ ರಾಜ್ಯ ಸಚಿವ)ಅವರ ಉಪಸ್ಥಿತರಿದ್ದರು.
ತವರೂರಿನತ್ತ ಅಸಹಾಯಕ, ಕಾರ್ಮಿಕರು, ಮಕ್ಕಳು
https://pragati.taskdun.com/healpless-workers-and-the-children-towards-home-place/
ಸದಭಿಮಾನದ ಗೂಡು ಖಾಲಿಯಾಗುವತ್ತ. ಕನ್ನಡಿಗರ ಮನದ ನೆಲ ಬೋಳು ಬೋಳಾಗುವತ್ತ – ಒಂದು ವಿಚಾರ.
https://pragati.taskdun.com/the-nest-of-goodwill-is-empty-the-floor-of-the-kannadigas-mind-is-becoming-empty-an-idea/
*ಮೂವರು ಮಕ್ಕಳೊಂದಿಗೆ ನೀರಿನ ಸಂಪ್ ಗೆ ಹಾರಿ ತಾಯಿ ಆತ್ಮಹತ್ಯೆ*
https://pragati.taskdun.com/mother3-childrensuicidevijayapura/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ