ಪ್ರಗತಿವಾಹಿನಿ ಸುದ್ದಿ, ಯಲ್ಲಾಪುರ: ರಾಜ್ಯದಲ್ಲೇ ಮೊದಲ ಬಾರಿಗೆ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದಲ್ಲಿ ಸೋಲಾರ್ ಹೆರಿಗೆ ಆಸ್ಪತ್ರೆ ಆರಂಭವಾಗಿದೆ.
30 ಲಕ್ಷ ರೂ ವೆಚ್ಚದಲ್ಲಿ ಸೌರ ವಿದ್ಯುತ್ ಆಸ್ಪತ್ರೆಯನ್ನಾಗಿ ಯಲ್ಲಾಪುರದ ತಾಲೂಕು ಆಸ್ಪತ್ರೆಯನ್ನು ಅಭಿವೃದ್ಧಿಪಡಿಸಲಾಗಿದೆ. ಸೆಲ್ಕೋ ಸೋಲಾರ್ ಕಂಪನಿ 25 ಲಕ್ಷ ರೂ. ನೀಡಿದ್ದು, ಸ್ವಯಂ ಸೇವಾ ಸಂಸ್ಥೆ ಮತ್ತು ತಾಲೂಕು ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆ ಕೂಡ ನೆರವು ನೀಡಿವೆ.
ಮಲೆನಾಡು ಪ್ರದೇಶವಾಗಿರುವ ಯಲ್ಲಾಪುರದಲ್ಲಿ ಪದೇ ಪದೆ ವಿದ್ಯುತ್ ಕೈ ಕೊಡುವುದರಿಂದ ಹೆರಿಗೆಗೆ ಸಮಸ್ಯೆಯಾಗುತ್ತಿತ್ತು. ಅದನ್ನು ತಪ್ಪಿಸಲು ನಿರಾತಂಕವಾಗಿ ಎಲ್ಲ ಉಪಕರಣಗಳನ್ನು ಬಳಸಿ ಹೆರಿಗೆ ಮಾಡಿಸುವುದಕ್ಕೆ ಈಗ ಅವಕಾಶವಾಗಿದೆ. ಹಾಗೆಯೇ ರಕ್ತ, ಔಷಧಗಳು ಕೆಡದಂತೆ ಸಂಗ್ರಹಿಸಿಡಲೂ ಅನುಕೂಲವಾಗುವುದು. ದಿನದ 24 ಗಂಟೆಯೂ ಬಿಸಿ ನೀರಿನ ಸೌಲಭ್ಯವೂ ಆಗಿದೆ.
ವೈದ್ಯರು ಕೂಡ ಈಗ ನಿಟ್ಟುಸಿರು ಬಿಡುವಂತಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ