Latest

ಮಹಿಳಾ ಕುಸ್ತಿಪಟುಗಳ ಹೋರಾಟಕ್ಕೆ ಮೊದಲ ಹಂತದ ಜಯ; ಬ್ರಿಜ್ ಭೂಷಣ ವಿರುದ್ಧ ಎರಡು FIR ದಾಖಲು

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಕಳೆದ ಹಲವು ದಿನಗಳಿಂದ ದೆಹಲಿಯ ಜಂತರ್ ಮಂತರ್ ನಲ್ಲಿ ಬೀದಿಗಿಳಿದು ಹೋರಾಟ ನಡೆಸಿರುವ ಮಹಿಳಾ ಕುಸ್ತಿಪಟುಗಳ ಹೋರಾಟಕ್ಕೆ ಮೊದಲ ಹಂತದ ಜಯ ಸಿಕ್ಕಿದೆ.

ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದ ಬೆನ್ನಲ್ಲೇ ದೆಹಲಿ ಪೊಲೀಸರು ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ ಶರಣ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಎರಡು FIR ದಾಖಲಿಸಿದ್ದಾರೆ.

ಅಪ್ರಾಪ್ತೆ ನೀಡಿದ ದೂರಿನನ್ವಯ ಬ್ರಿಜ್ ಭೂಷಣ ವಿರುದ್ಧ ಪೋಕ್ಸೊ ಕಾಯ್ದೆಯಡಿ ಒಂದು FIR ದಾಖಲಿಸಿದ್ದು, ಉಳಿದ ಮಹಿಳಾ ಕುಸ್ತಿಪಟುಗಳು ನೀಡಿದ ದೂರಿನನ್ವಯ ಇನ್ನೊಂದು FIR ದಾಖಲಿಸಿದ್ದಾರೆ.

ಬ್ರಿಜ್ ಭೂಷಣ ಅನುಚಿತ ವರ್ತನೆಗಳ ಹಿನ್ನೆಲೆಯಲ್ಲಿ ಅವರನ್ನು ಬಂಧಿಸುವಂತೆ ಆಗ್ರಹಿಸಿ ಹಲವು ದಿನಗಳಿಂದ ಅಂತಾರಾಷ್ಟ್ರೀಯ ಮಟ್ಟದಿಂದ ಹಿಡಿದು ದೇಶದ ಅನೇಕ ಮಹಿಳಾ ಕುಸ್ತಿಪಟುಗಳು ಬೀದಿಗಿಳಿದು ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದರು. ಪುರುಷ ಕ್ರೀಡಾಪಟುಗಳೂ ಇದಕ್ಕೆ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರತಿಭಟನಾಕಾರರು ನ್ಯಾಯ ಪಡೆಯಲು ಹಗಲು- ರಾತ್ರಿ ಹೋರಾಡುತ್ತಿದ್ದು ರಾತ್ರಿ ಫುಟ್ ಪಾಥ್ ನಲ್ಲೇ ಮಲಗಿದ್ದ ದೃಶ್ಯವೊಂದರ ಚಿತ್ರಗಳನ್ನು ಅಂತಾರಾಷ್ಟ್ರೀಯ ಮಹಿಳಾ ಕುಸ್ತಿಪಟುವೊಬ್ಬರು ಇತ್ತೀಚೆಗೆ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಮಹಿಳಾ ಕುಸ್ತಿಪಟುಗಳ ಈ ಹೋರಾಟಕ್ಕೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಇದೀಗ ಪೊಲೀಸರು FIR ದಾಖಲಿಸಿದ್ದರೂ ಬ್ರಿಜ್ ಭೂಷಣ ಬಂಧನಕ್ಕೆ ಆಗ್ರಹಿಸಿ ಹೋರಾಟ ಮುಂದುವರಿದಿದೆ. ಹೀಗಾಗಿ ಬ್ರಿಜ್ ಭೂಷಣ ೀಗ ಬಂಧನದ ಭೀತಿ ಎದುರಿಸುತ್ತಿದ್ದಾರೆ.

https://pragati.taskdun.com/the-price-of-gold-decreased-buying-jewelery-is-auspicious/
https://pragati.taskdun.com/m-b-patil-sparks-against-mla-basanagouda-patil-yatnal/
https://pragati.taskdun.com/sivamogga-central-jailprisonersuicide/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button