Belagavi NewsBelgaum NewsCrimeKannada NewsKarnataka NewsNational

*ಸಂತೆಯಲ್ಲಿ ನುಗ್ಗಿ ಕಳ್ಳತನ: ಐವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಜನರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶಮನೆವಾಡಿ ಗ್ರಾಮದಲ್ಲಿ  ವಾರದ ಸಂತೆಯ ವೇಳೆ ಜನಜಂಗುಳಿಯಲ್ಲಿ ನುಗ್ಗಿ ಕಳ್ಳತನಕ್ಕೆ ಯತ್ನಿಸುತ್ತಿದ್ದ ಅಂತರರಾಜ್ಯ ಕಳ್ಳರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ.

ಶಮನವಾಡಿ ಗ್ರಾಮದಲ್ಲಿ ಎಂದಿನಂತೆ ವಾರದ ಸಂತೆ ನಡೆದಿತ್ತು. ಈ ವೇಳೆ ಸಾರ್ವಜನಿಕರ ಜನಸಂದಣಿಯನ್ನು ದುರುಪಯೋಗಪಡಿಸಿಕೊಂಡು ಜೇಬುಗಳ್ಳತನ ಹಾಗೂ ಸರಗಳ್ಳತನ ಮಾಡಲು ಯತ್ನಿಸುತ್ತಿದ್ದ ಐವರು ಕಳ್ಳರನ್ನು ಸ್ಥಳೀಯರು ಒಟ್ಟಿಗೆ ಸೇರಿಸಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸಂತೆ ಮೈದಾನಕ್ಕೆ ಧಾವಿಸಿದ ಸದಲಗಾ ಠಾಣೆಯ ಪೊಲೀಸರು, ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಈ ಕುರಿತು ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಬಂಧಿತರನ್ನು ಸುಜಾತಾ ಚೌಗಲಾ, ವನಿತಾ ರಾಕ್ ಪಸಾರೆ, ಸಾರಿಕಾ ಸಕಟ, ಜ್ಯೋತಿ ಹಾತಲಗೆ ಹಾಗೂ ನಾಮದೇವ ರಾಕಪಸಾರೆ ಎಂದು ಗುರುತಿಸಲಾಗಿದೆ. ಈ ಐವರ ಪೈಕಿ ನಾಲ್ವರು ನೆರೆಯ ಮಹಾರಾಷ್ಟ್ರ ಮೂಲದವರಾಗಿದ್ದಾರೆ ಎಂದು ತಿಳಿದುಬಂದಿದೆ.

Home add -Advt

Related Articles

Back to top button