Kannada NewsKarnataka NewsLatestSports

*ಕ್ರಿಕೆಟಿಗ ಎಸ್.ಎಲ್.ಅಕ್ಷಯ್ ಹೃದಯಾಘಾತಕ್ಕೆ ಬಲಿ*

ಪ್ರಗತಿವಾಹಿನಿ ಸುದ್ದಿ: ಕ್ರಿಕೆಟ್ ಪಂದ್ಯದ ವೇಲೆಯೇ ಕ್ರಿಕೆಟಿಗ ಎಸ್.ಎಲ್.ಅಕ್ಷಯ್ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅವರಿಗೆ ಕೇವಲ 36 ವರ್ಷ ವಯಸ್ಸಾಗಿತ್ತು.

ಬೆಂಗಳೂರಿನ ಬೊಮ್ಮಸಂದ್ರದಲ್ಲಿ ಎಸ್ ಎಲ್ ಎಸ್ ಮೈದಾನದಲ್ಲಿ ಕೆ.ಎಸ್.ಸಿ.ಎ ಲೀಗ್ ಪಂದ್ಯಾವಳಿ ನಡೆಯುತ್ತಿತ್ತು. ನಸೂರ್ ಸ್ಮಾರಕ ಶೀಲ್ಡ್ ನ ಏಕದಿನ ಲೀಗ್ ಪಂದ್ಯಾಟದ ವೇಳೆ ಅಕ್ಷಯ್ 4 ಓವರ್ ಬೌಲಿಂಗ್ ಮಾಡಿದ್ದರು. ಬಳಿಕ ಆರೋಗ್ಯ ಸಮಸ್ಯೆ ಇದೆ ಎಂದು ಅರ್ಧಕ್ಕೆ ಪಂದ್ಯದಿಂದ ಹೊರಬಂದು ನೀರು ಕುಡಿಯುತ್ತಿದ್ದರು.

ನೀರು ಕುಡಿಯುತ್ತಿದ್ದಾಗ ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button