Cancer Hospital 2
Beereshwara 36
LaxmiTai 5

*ಡ್ರಾಪ್ ಕೇಳಿದ ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ ಐವರು ಅರೆಸ್ಟ್*

Anvekar 3

ಪ್ರಗತಿವಾಹಿನಿ ಸುದ್ದಿ: ಡ್ರಾಪ್ ಕೇಳಿದ ಬಾಲಕಿ ಮೇಲೆ ಯುವಕರು ಅತ್ಯಾಚಾರವೆಸಗಿದ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕುಟ್ಟ ಸಮೀಪದ ನಡೆದಿದೆ.

ತಾಲೂಕಿನ ಕುಟ್ಟ ಸಮೀಪದ ಕಾಫಿ ತೋಟದಲ್ಲಿ ಜೂನ್ 9 ರಂದು ಅತ್ಯಾಚಾರ ಪ್ರಕರಣ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮತ್ತೋರ್ವ ಬಾಲಕಿ ಮೇಲೂ ಅತ್ಯಾಚಾರಕ್ಕೆ ಯತ್ನಿಸಲಾಗಿದೆ.

ಜೂನ್ 9 ರಂದು ಮೂವರು ಸ್ನೇಹಿತರ ಜೊತೆ ರಸ್ತೆಯಲ್ಲಿ ಬಾಲಕಿಯರು ನಡೆದು ಸಾಗುತ್ತಿದ್ದರು. ಈ ವೇಳೆ ದಾರಿಯಲ್ಲಿ ಬಂದ ಅಪರಿಚಿತ ಕಾರನ್ನು ಮೂವರು ಹತ್ತಿದ್ದಾರೆ. ನಾಗರಹೊಳೆಗೆ ಡ್ರಾಪ್ ನೀಡುವಂತೆ ಬಾಲಕಿಯರು ವಿನಂತಿ ಮಾಡಿದ್ದಾರೆ.

Emergency Service

ಮಾರುತಿ 800 ಕಾರಿನಲ್ಲಿ ಬಾಲಕಿಯರು ನಾಗರಹೊಳೆ ಕಡೆ ತೆರಳಿದ್ದು, ದಾರಿ ಮಧ್ಯೆ ಕಾಫಿ ತೋಟದಲ್ಲಿ ಓರ್ವ ಬಾಲಕಿ ಮೇಲೆ ನವೀಂದ್ರ, ಅಕ್ಷಯ್ ಎಂಬುವವರಿಂದಲೇ ಅತ್ಯಾಚಾರ ಮಾಡಲಾಗಿದೆ. ಮತ್ತೋರ್ವ ಬಾಲಕಿ ಮೇಲೆ ರಾಹುಲ್, ಮನು, ಸಂದೀಪ್ ಎಂಬುವವರಿಂದ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ.

ಸಂತ್ರಸ್ತ ಬಾಲಕಿಯರಿಂದ ಕುಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ಕೊಡಗು ಎಸ್ಪಿ ರಾಮರಾಜನ್ ಭೇಟಿ ನೀಡಿ ಪರಿಶೀಲಿಸಿದ್ದಾರೆ

Bottom Add3
Bottom Ad 2