Belagavi NewsBelgaum NewsKannada NewsKarnataka NewsNationalPolitics
*ಬಿಜೆಪಿ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದ ಸಂಸದ ಜಗದೀಶ್ ಶೆಟ್ಟರ್ *

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಧರ್ಮನಾಥ ಸರ್ಕಲ್ ಹತ್ತಿರವಿರುವ ಬಿಜೆಪಿ ಗ್ರಾಮಾಂತರ ಜಿಲ್ಲಾ ಕಾರ್ಯಾಲಯದ ಆವರಣದಲ್ಲಿ 77 ನೇ ಗಣರಾಜ್ಯೋತ್ಸವದ ಪ್ರಯುಕ್ತ ಸಂಸದರಾದ ಜಗದೀಶ್ ಶೆಟ್ಟರ್ ಅವರು ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಸುಭಾಷ ಪಾಟೀಲ, ಪ್ರಮುಖರಾದ ಮುರುಘೇಂದ್ರಗೌಡ ಪಾಟೀಲ, ಚೇತನ್ ಅಂಗಡಿ, ಮಹೇಶ್ ಮೋಹಿತೆ, ಯಲ್ಲೇಶ್ ಕೊಲಕಾರ, ಗುರುಪ್ರಸಾದ್ ಕೋತಿನ್, ಮನೋಜ್ ಪಾಟೀಲ, ಶ್ವೇತಾ ಜಗದಾಳೆ, ಪ್ರವೀಣ ಮಾಳೇದಾರ, ಹಾಗೂ ಪ್ರಮುಖ ಪದಾಧಿಕಾರಿಗಳು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.



