Belagavi NewsLatest

*ಶ್ರೀ ಬೀರೇಶ್ವರನಿಗೆ ಧ್ವಜ ಪೂಜೆ*

ಪ್ರಗತಿವಾಹಿನಿ ಸುದ್ದಿ; ಯರಗಟ್ಟಿ ತಾಲೂಕಿನ ಮಬನೂರ ಗ್ರಾಮದ ಶ್ರೀ ಬೀರೇಶ್ವರ (ಕರಿಸಿದ್ದೇಶ್ವರ) ನಿಗೆ 75 ನೇ ಗಣರಾಜ್ಯೋತ್ಸವ ಪ್ರಯುಕ್ತ ಕೇಸರಿ ಚೆಂಡ ಹೂವು, ಬಿಳಿ ಸೇವಂತಿಗೆ(ಪೂರ್ಣಿಮ) ಹೂವು ಹಾಗೂ ಹಸಿರು ತುಳಸಿ ಎಲೆಗಳಿಂದ ಅಲಂಕರಿಸಿ, ಹಿರಿಯ ಅರ್ಚಕ ಆಸಂಗೆಪ್ಪ ಸಿದ್ದಲಿಂಗಪ್ಪ ಪಟಾತರ್ ಶುಕ್ರವಾರ ಭಾರತ ಧ್ವಜದ ರೀತಿಯಲ್ಲಿ ದೇವರ ಮೂರ್ತಿಗೆ ಕೆಳಗೆ ಹಾಗೂ ಮೇಲೆ ಎರಡು ಕಡೆ ಪೂಜೆ ನೆರವೇರಿಸಿದ ಪರಿ ವಿಭಿನ್ನ ಹಾಗೂ ಆಕರ್ಷನಿಯವಾಗಿತ್ತು.

ದೇವಸ್ಥಾನದ ಅರ್ಚಕ ಪ್ರತಿ ವರ್ಷ ರಾಷ್ಟ್ರೀಯ ಹಬ್ಬಗಳಲ್ಲಿ ವಿಶೇಷ ಪೂಜೆ ನೆರವೇರಿಸಿ, ಅಭಿಷೇಕ ಕೈಗೊಂಡು, ದೇವರಿಗೆ ನೈವೇದ್ಯ ಜರುಗಿಸುವುದು ವಿಶೇಷ.

Home add -Advt

Related Articles

Back to top button