![](https://pragativahini.com/wp-content/uploads/2023/12/medak-flight-crash.jpg)
ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ತರಬೇತಿ ನಿರತ ವಿಮಾನವೊಂದು ಪತನಗೊಂಡಿದ್ದು, ಓರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ತೆಲಂಗಾಣದ ಮೇದಕ್ ನ ತೂಪ್ರಾನ್ ಎಂಬಲ್ಲಿ ನಡೆದಿದೆ.
ತರಬೇತಿ ನಿರತ ಲಘು ವಿಮಾನ ಇದಾಗಿದ್ದು, ವಿಮಾನದಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದರು. ತೂಪ್ರಾನ್ ಬಳಿ ವಿಮಾನ ಏಕಾಏಕಿ ಪತನಗೊಂಡು ಹೊತ್ತಿ ಉರಿದಿದೆ. ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದಾರೆ.
ಲಘು ವಿಮಾನ ದುಂಡಿಗಲ್ ಏರ್ ಪೋರ್ಟ್ ಗೆ ಸೇರಿದ ವಿಮಾನವಾಗಿತ್ತು ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಧಿಕಾರಿಗಳು ದೌಡಾಯಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ