Kannada NewsKarnataka NewsLatest

ಬೆಳಗಾವಿಯಿಂದ ನಾಳೆಯಿಂದ ವಿಮಾನ ಹಾರಾಟ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೊರೋನಾ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ವಿಮಾನ ಹಾರಾಟ ನಾಳೆಯಿಂದ ಆರಂಭವಾಗಲಿದೆ.

ಬೆಳಗಾವಿ ವಿಮಾನ ನಿಲ್ದಾಣದಿಂದ ಸೋಮವಾರ ವಿಮಾನ ಹಾರಾಟ ಶುರುವಾಗಲಿದೆ. ಬೆಂಗಳೂರು ಮತ್ತು ಅಹ್ಮದಾಬಾದ್ ಗೆ ಸ್ಟಾರ್ ಏರ್ ವೇಸ್, ಹೈದರಾಬಾದ್ ಮತ್ತು ಮುಂಬೈಗೆ ಸ್ಪೈಸ್ ಜೆಟ್, ಪುಣೆಗೆ ಏರ್ ಇಂಡಿಯಾ, ಮೈಸೂರು ಮತ್ತು ಹೈದರಾಬಾದ್ ಗೆ ಟ್ರ್ಯೂ ಜೆಟ್ ಹಾರಾಟ ನಡೆಸಲಿವೆ. 26ರಿಂದ ಇಂಡಿಗೋ ಕೂಡ ಹೈದರಾಬಾದ್ ಹಾರಾಟ ಆರಂಭಿಸಲಿದೆ.

Home add -Advt

ಒಟ್ಟಾರೆ 13 ವಿಮಾನಗಳ ಆಗಮನ ಮತ್ತು ನಿರ್ಗಮನ ಆರಂಭವಾಗುವುದು. ಇದಕ್ಕಾಗಿ ಎಲ್ಲ ಸಿದ್ಧತೆಗಳು ನಡೆದಿವೆ. ಈ ಕುರಿತು ಬೆಳಗಾವಿ ಏರ್ ಪೋರ್ಟ್ ಟ್ವೀಟ್ ಮೂಲಕ ಮಾಹಿತಿ ಪ್ರಕಟಿಸಿದೆ.

Related Articles

Back to top button