Latest

ರಾಜ್ಯದಲ್ಲಿ ಇಂದು 130 ಜನರಿಗೆ ಕೊರೊನಾ ಸೋಂಕು ದೃಢ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಒಂದೇ ದಿನ 130 ಜನರಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ಕರ್ನಾಟಕದಲ್ಲಿ ಸೋಂಕು ಪೀಡಿತರ ಸಂಖ್ಯೆ 2089ಕ್ಕೆ ಏರಿಕೆಯಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಮಾಹಿತಿ ಪ್ರಕಾರ ಇಂದು ಚಿಕ್ಕಬಳ್ಳಾಪುರ 28, ಚಿಕ್ಕಮಗಳೂರು 24, ಯಾದಗಿರಿ 23, ಉಡುಪಿ 18, ಹಾಸನ 14, ಮಂಡ್ಯ 15, ಬೀದರ್ 6, ಕಲಬುರಗಿ 6, ಕೊಡಗು 1, ತುಮಕೂರು 2, ತುಮಕೂರು, ಕೊಡಗು, ಉತ್ತರ ಕನ್ನಡ, ಶಿವಮೊಗ್ಗದಲ್ಲಿ ತಲಾ 2, ಬೆಂಗಳೂರು, ಧಾರವಾಡ, ವಿಜಯಪುರ, ದಕ್ಷಿಣ ಕನ್ನಡದಲ್ಲಿ ತಲಾ 1 ಕೇಸ್ ಪತ್ತೆಯಾಗಿದೆ.

Home add -Advt

2089 ಕೊರೊನಾ ಸೋಂಕಿತರ ಪೈಕಿ 42 ಜನರು ಸಾವನ್ನಪ್ಪಿದ್ದು, 654 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 1391 ಸೋಂಕಿತರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Related Articles

Back to top button