
ನಗರದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ನಗರಕ್ಕೆ ನೀರು ಸರಬರಾಜು ಮಾಡುವ ಮೂಲಗಳಾದ ರಕ್ಕಸಕೊಪ್ಪ ಹಾಗೂ ಹಿಡಕಲ್ ಜಲಾಶಯಗಳ ವ್ಯಾಪ್ತಿಯಲ್ಲಿ ಮಳೆ ಹೆಚ್ಚಾಗಿದ್ದು, ಮಳೆಯಿಂದಾಗಿ ನಗರಕ್ಕೆ ನೀರು ಸರಬರಾಜು ಮಾಡುವ ಪಂಪಹೌಸಗಳಲ್ಲಿ ನೀರು ಆವರಿಸಿಕೊಂಡಿರುವುದರಿಂದ ಪಂಪಿಗ್ ಮಷನರಿಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ನಿಲುಗಡೆ ಮಾಡಲಾಗಿದೆ.
ನಗರದ ಜನತೆಗೆ ಸದ್ಯ ಕೊಳವೆ ಬಾವಿಗಳಿಂದ, ತೆರೆದ ಬಾವಿಗಳಿಂದ ಹಾಗೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸಬೆಕು ಎಂದು ಬೆಳಗಾವಿ ಕಾರ್ಯಪಾಲಕ ಅಭಿಯಂತರು ಕ.ನ.ನೀ.ಸ ಮತ್ತು ಒಳಚರಂಡಿ ಮಂಡಳಿ ವಿಭಾಗದವರು ತಿಳಿಸಿದ್ದಾರೆ.
ತುರ್ತು ಸಂದರ್ಭದಲ್ಲಿ ಸಾರ್ವಜನಿಕರು ಕುಂದುಕೊರತೆಗಳಿಗಾಗಿ ವ್ಹಿ.ಎಲ್.ಚಂದ್ರಪ್ಪ, ಕಾರ್ಯಪಾಲಕ ಅಭಿಯಂತರರು (ದೂರವಾಣಿ ಸಂಖ್ಯೆ ೯೪೮೦೮೧೩೧೩೯), ಎಂ.ಜಿ.ರಾಚನಾಯ್ಕರ, ಸಹಾಯಕ ಕಾರ್ಯಪಾಲಕ ಅಭಿಯಂತರರು ವಾರ್ಡ ಸಂಖ್ಯೆ, ೧ ರಿಂದ ೨೪ ಮತ್ತು ೫೮ (ದೂರವಾಣಿ ಸಂಖ್ಯೆ ೯೪೮೦೮೧೩೧೭೩), ಎಸ್.ಬಿ ಹಾಲಣ್ಣವರ ವಾರ್ಡ ಸಂಖ್ಯೆ ೨೫ ರಿಂದ ೫೬, ೫೭ (ಕಣಬರಗಿ ಪ್ರದೇಶ) (ದೂರವಾಣಿ ಸಂಖ್ಯೆ ೯೪೮೦೮೧೩೧೭೬),
ಟಿ.ಎನ್ ಮಂಜುನಾಥ ಸಹಾಯಕ ಅಭಿಯಂತರರು ವಾರ್ಡ ಸಂಖ್ಯೆ ೧ ರಿಂದ ೮, ೧೭, ೧೮, ೧೯, ೪೪ ರಿಂದ ೪೬, ೪೭ ಭಾಗಶಃ ಮತ್ತು ೫೭ ಭಾಗಶಃ ಮತ್ತು ೫೮ (ದೂರವಾಣಿ ಸಂಖ್ಯೆ ೯೪೪೮೯೯೩೫೯೯), ಯು.ಬಿ ಶೀಗಿಹಳ್ಳಿ ಕಿರಿಯ ಅಭಿಯಂತರರು ವಾರ್ಡಗಳ ಸಂಖ್ಯೆ ೯ ರಿಂದ ೧೬, ೨೦ ರಿಂದ ೨೪, ೨೫, ೨೬ ಭಾಗಶಃ ಮತ್ತು ೫೭ ಭಾಗಶಃ ಮತ್ತು ೫೮ (ದೂರವಾಣಿ ಸಂಖ್ಯೆ ೯೪೮೦೬೮೯೫೩೦), ವೀಣಾ. ಎಸ್. ಹೆಗಡೆ ಸಹಾಯಕ ಅಭಿಯಂತರರು ವಾರ್ಡ ಸಂಖ್ಯೆ ೨೫ ಭಾಗಶಃ ೨೬, ೨೭, ೨೮, ೨೯, ೩೦, ೩೧, ೩೨, ೩೪, ೩೬, ೪೬, ೫೫ (ದೂರವಾಣಿ ಸಂಖ್ಯೆ ೯೪೪೮೯೯೨೫೮೧), ಬಿ.ಎನ್.ಮಡಿವಾಳರ ಕಿರಿಯ ಅಭಿಯಂತರರು ೩೩, ೩೫, ೩೭, ೩೮, ೩೯, ೪೦, ೪೧ ಭಾಗಶಃ, ೪೨, ೪೩, ೪೪ ಭಾಗಶಃ, ೪೫, ೪೭, ೪೮, ೪೯, ೫೦, ೫೧, ೫೨, ೫೩, ೫೪, ೫೬ (ದೂರವಾಣಿ ಸಂಖ್ಯೆ ೯೪೪೮೯೯೮೨೫೫), ಸಹಾಯವಾಣಿ (ವಿಭಾಗ ಕಚೇರಿ) (ದೂರವಾಣಿ ಸಂಖ್ಯೆ ೦೮೩೧-೨೪೭೨೫೪೨ ಮತ್ತು ೯೪೪೮೯೯೮೫೬೩) ನ್ನು ಸಂಪರ್ಕಿಸಬಹುದು.
ಸಾರ್ವಜನಿಕರು ಜಲ ಮಂಡಳಿಯೊಂದಿಗೆ ಸಹಕರಿಸಬೇಕು ಎಂದು ಬೆಳಗಾವಿ ಒ.ಚ ಮತ್ತು ಕ.ನ.ನೀ.ಸ ಮಂಡಳಿಯ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಖಾನಾಪುರ ತಾಲ್ಲೂಕು: 123 ಗ್ರಾಮಗಳು ಪ್ರವಾಹ ಬಾಧಿತ
ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದಾಗಿ ಖಾನಾಪೂರ ತಾಲ್ಲೂಕಿನ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜಿಲ್ಲೆಯ ಖಾನಾಪೂರ ತಾಲ್ಲೂಕ ಚಿಕ್ಕದಾದರೂ ೧೨೩ ಗ್ರಾಮಗಳು ಪ್ರವಾಹಕ್ಕೆ ಸಿಲುಕಿವೆ, ೨೩೬ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.
ಅಥಣಿ-೪೩೫೧, ರಾಯಬಾಗ-೪೩೪೯, ಹುಕ್ಕೇರಿ-೯೭೫, ಗೋಕಾಕ-೧೦೮೨, ಕಾಗವಾಡ-೪೫೯೯, ನಿಪ್ಪಾಣಿ-೨೯೭೩, ಮೂಡಲಗಿ-೧೧೦೦, ಬೆಳಗಾವಿ-೫೪೬, ಬೈಲಹೊಂಗಲ-೩೮, ರಾಮದುರ್ಗ-೬೨೮, ಸವದತ್ತಿ-೬೩೧ ಹಾಗೂ ಕಿತ್ತೂರು-೨೭ ಕುಟುಂಬಗಳನ್ನು ಆಗಸ್ಟ್ ೯ರವರೆಗೆ ಸ್ಥಳಾಂತರಿಸಲಾಗಿದೆ.
ಖಾನಾಪೂರ ತಾಲ್ಲೂಕಿನಲ್ಲಿ ಒಟ್ಟಾರೆ ೧೧ ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಈ ಕೆಂದ್ರಗಳಲ್ಲಿ ೯೨೫ ಜನರು ಆಶ್ರಯ ಪಡೆದುಕೊಂಡಿದ್ದಾರೆ.
ಅದೇ ರೀತಿ ರಕ್ಷಿಸಲಾದ ಹಾಗೂ ಸ್ಥಳಾಂತರಿಸಲಾದ ಜಾನುವಾರುಗಳ ಪೈಕಿ ೧೯೫ ಜಾನುವಾರುಗಳಿಗೆ ಪರಿಹಾರ ಕೇಂದ್ರದಲ್ಲಿ ಅಶ್ರಯ ಒದಗಿಸಲಾಗಿದೆ.
ಖಾನಾಪೂರ ತಾಲ್ಲೂಕಿನಲ್ಲಿ ೨೩೬ ಕುಟುಂಬಗಳು ಪ್ರವಾಹಕ್ಕೆ ಒಳಗಾಗಿದ್ದು, ಒಟ್ಟು ೧೦೯೩ ಜನರನ್ನು ಸ್ಥಳಾಂತರಿಸಿದ್ದು, ಪರಿಹಾರ ಕೇಂದ್ರಗಳಲ್ಲಿ ೯೨೫ ಜನರು ಜನರು ಆಶ್ರಯ ಪಡೆದುಕೊಂಡಿದ್ದರೆ.
ಜಿಲ್ಲೆಯಲ್ಲಿ ಕಿತ್ತೂರು ನೂತನ ತಾಲ್ಲೂಕು, ಇಲ್ಲಿ ೯ ಗ್ರಾಮಗಳು ಪ್ರವಾಹಕ್ಕೆ ಸಿಲುಕಿದ್ದು, ೨೭ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಕಿತ್ತೂರು ತಾಲ್ಲೂಕಿನಲ್ಲಿ ಒಟ್ಟು ೯ ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದ್ದು, ೨೬೧ ಜನ ಆಶ್ರಯ ಪಡೆದುಕೊಂಡಿದ್ದಾರೆ.
ಸೇನೆ, ಪೊಲೀಸ್, ಎನ್.ಡಿ.ಆರ್.ಎಫ್., ಎಸ್.ಡಿ.ಆರ್.ಎಫ್, ಗೃರಕ್ಷಕದಳ ಸೇರಿದಂತೆ ಸರ್ಕಾರದ ಎಲ್ಲ ಇಲಾಖೆಯ ಅಧಿಕಾರಿಗಳು ನಿರಂತರವಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ನೆರೆ ಪರಿಹಾರ ಕೇಂದ್ರಗಳಿಗೆ ಉಚಿತ ಹಾಲು
ಜಿಲ್ಲೆಯಾದ್ಯಂತ ಪ್ರವಾಹ ಪೀಡಿತ ಸಂತ್ರಸ್ತರಿಗೆ ಸ್ಥಾಪಿಸಲಾಗಿರುವ ಪರಿಹಾರ ಕೇಂದ್ರಗಳಿಗೆ ನಂದಿನಿ ಹಾಲು ಹಾಗೂ ಜಾನುವಾರುಗಳಿಗೆ ನಂದಿನಿ ಪಶು ಆಹಾರವನ್ನು ಉಚಿತವಾಗಿ ಒದಗಿಸಲು ಜಿಲ್ಲಾ ಹಾಲು ಒಕ್ಕೂಟ ನಿರ್ಧರಿಸಿದೆ.
ಮಳೆಯ ಅಬ್ಬರಕ್ಕೆ ಗ್ರಾಮೀಣ ಜನರ ಬದುಕು ಹಾಗೂ ಜಾನುವಾರುಗಳ ಜೀವನ ಅತಂತ್ರವಾಗಿದೆ. ಇದನ್ನರಿತು ವಿಧಾನ ಪರಿಷತ್ ಸದಸ್ಯರು ಹಾಗೂ ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರಾದ ವಿವೇಕ. ವ. ಪಾಟೀಲ ರವರು ಅಗಸ್ಟ್ ೯ ರಂದು ತುರ್ತು ಆಡಳಿತ ಮಂಡಳಿ ಸಭೆ ನಡೆಸಿದರು.
ಅಗಸ್ಟ್ ೧೦ ರಂದು ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ರಾಯಬಾಗ ತಾಲ್ಲೂಕಿನ ನೆರೆಪರಿಹಾರ ಕೇಂದ್ರಗಳಾದ ಬೆಕ್ಕೇರಿ, ಚಿಂಚಲಿ, ಬೀರಡಿ, ಸಿದ್ದಾಪೂರ, ಕೆಮಲಾಪೂರ ಹಾಗೂ ಇತರೆ ಕೇಂದ್ರಗಳಿಗೆ ಉಚಿತವಾಗಿ ನಂದಿನಿ ಹಾಲು ಮತ್ತು ಜಾನುವಾರುಗಳಿಗೆ ನಂದಿನಿ ಪಶು ಆಹಾರವನ್ನು ಆಡಳಿತ ಮಂಡಳಿ ಸದಸ್ಯರೊಂದಿಗೆ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ