National

*ಪ್ರವಾಹದ ನೀರಿನಲ್ಲಿ ಬಿದ್ದ ಸೇನಾ ಹೆಲಿಕಾಪ್ಟರ್*

ಪ್ರಗತಿವಾಹಿನಿ ಸುದ್ದಿ: ಪ್ರವಾಹ ಸಂತ್ರಸ್ತರ ರಕ್ಷಣಾ ಕಾರ್ಯಾಚರನೆಯಲ್ಲಿ ತೊಡಗಿದ್ದ ಸೇನಾ ಹೆಲಿಕಪ್ಟರ್ ಪ್ರವಾಹದ ನೀರಿನಲ್ಲಿ ಬಿದ್ದಿರುವ ಘಟನೆ ಬಿಹರದಲ್ಲಿ ನಡೆದಿದೆ.

ಭಾರಿ ಮಳೆಯಿಂದಾಗಿ ಬಿಹರದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಹಲವು ಪ್ರದೇಶಗಳು ಮುಳುಗಡೆಯಾಗಿವೆ. ಪ್ರವಾಹದಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಸೇನಾ ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ವೇಳೆ ಹೆಲಿಕಾಪ್ಟರ್ ಎಂಜಿನ್ ದೋಷದಿಂದಾಗಿ ಪ್ರವಾಹದ ನೀರಿನಲ್ಲಿಯೇ ತುರ್ತು ಭೂಸ್ಪರ್ಶವಾಗಿದೆ.

ಪ್ರವಾಹದ ನೀರಿನಲ್ಲಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶವಾಗುತ್ತಿದ್ದಂತೆ ಹೆಲಿಕಾಪ್ಟರ್ ನ ಒಂದು ಭಾಗವೇ ಮುಳುಗಡೆಯಾಗಿದೆ. ಹೆಲಿಕಾಪ್ಟರ್ ನಲ್ಲಿ ಒಟ್ಟು ನಾಲ್ವರು ಸಿಬ್ಬಂದಿಗಳು ಇದ್ದರು. ನಾಲ್ವರನ್ನು ರಕ್ಷಿಸಲಾಗಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

Home add -Advt

Related Articles

Back to top button