Kannada NewsLatest

ಜಾನಪದ ಕಲೆ ಭಾರತದ ಮೂಲ ಸಂಸ್ಕೃತಿ: ಮಹಾಂತೇಶ ಪಾಟೀಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ಜಾನಪದ ಸಂಸ್ಕೃತಿಯೂ ಭಾರತದ ಮೂಲ ಸಂಸ್ಕೃತಿಯಾಗಿದೆ ಇದನ್ನು ಉಳಿಸಿ ಬೆಳೆಸುವಲ್ಲಿ ಇಂತಹ ಸಂಘ-ಸಂಸ್ಥೆಗಳ ಪಾತ್ರ ಬಹುಮುಖ್ಯವಾಗಿದೆ ಆದ್ದರಿಂದ ಮೇಲಿಂದ ಮೇಲೆ ಇಂತಹ ಜಾನಪದ ಕಾರ್ಯಕ್ರಮಗಳು ನೆರವೇರಬೇಕಿದೆ” ಎಂದು ವಕೀಲ ಮಹಾಂತೇಶ ಟಿ. ಪಾಟೀಲ ಹೇಳಿದರು.

ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಜೋಕಾನಟ್ಟಿಯ ಶ್ರೀ ಸಿದ್ಧಾರೂಢ ಮಹಿಳಾ ಕಲಾ ಸಂಘದ ಜಂಟಿ ಆಶ್ರಯದಲ್ಲಿ ಮೂಡಲಗಿ ತಾಲೂಕಿನ ಫುಲಗಡ್ಡಿ ಗ್ರಾಮದಲ್ಲಿ ಆಯೋಜಿಸಿದ್ದ ಜಾನಪದ ಸಾಂಸ್ಕೃತಿಕ ಕಲಾ ಉತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಶ್ರೀ ಅಭಿನವ ಸಂಗಮನಾಥ ಸ್ವಾಮೀಜಿ, ಶ್ರೀ ಚಿದಾನಂದ ಸ್ವಾಮೀಜಿ, ಗುರು ವೀರಭದ್ರಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಉಪನ್ಯಾಸಕ ಮತ್ತು ಸಾಹಿತ್ಯ ಚಿಂತಕ ಪ್ರಕಾಶ ಕೋಟಿನತೋಟ ಅವರು ಸಾವಯವ ಕೃಷಿ ಬಗ್ಗೆ ಮಾತನಾಡಿ ಜಾನಪದ ಕೃಷಿ ಬಗ್ಗೆ ತಿಳಿಸಿದರಲ್ಲದೆ, ಮೊದಲಿನ ಸಾವಯವ ಕೃಷಿ ಪದ್ಧತಿಯನ್ನು ಬಳಸಿ ಸಾವಯವ ಬೆಳೆಗಳನ್ನು ಬೆಳೆಯಬೇಕು ಎಂದು ಸಲಹೆ ನೀಡಿದರು.

ಅತಿಥಿಯಾಗಿ ಭಾಗವಹಿಸಿದ್ದ ಸಾಹಿತ್ಯ ಚಿಂತಕ ಡಾ. ಅರುಣ ಸವತಿಕಾಯಿ ಅವರು ಮಾತನಾಡಿ, “ಭಾರತದಲ್ಲಿ ಜಾನಪದ ಕಲಾ ಸಂಸ್ಕೃತಿಯು ಅತೀ ಪುರಾತನವಾಗಿದ್ದು, ಇತ್ತೀಚಿನ ದಿನಗಳಲ್ಲಿ ಇದು ಕಣ್ಮರೆಯಾಗುತ್ತಿದೆ. ಆದ್ದರಿಂದ ಇಂತಹ ಕಾರ್ಯಕ್ರಮಗಳನ್ನು ನಾವೆಲ್ಲರೂ ಕೂಡಿಕೊಂಡು ಯಶಸ್ವಿಯಾಗಿ ನೇರವೇರಿಸಬೇಕು” ಎಂದರು.

Home add -Advt

“ಇತ್ತಿಚೀನ ದಿನಗಳಲ್ಲಿ ಮೊಬೈಲ್, ಕಂಪ್ಯೂಟರ್ ಹಾಗೂ ಟಿವಿ ಬಳಕೆಯಿಂದ ಹಲವಾರು ಜಾನಪದ ಕಲೆಗಳು ನಶಿಸಿ ಹೋಗುತ್ತಿವೆ ಆದ್ದರಿಂದ ನಾವು ಇವುಗಳ ಬಳಕೆಯನ್ನು ಕಡಿಮೆ ಮಾಡಿ ಜಾನಪದ ಸಂಸ್ಕೃತಿಯನ್ನು ಬೆಳೆಸಬೇಕು” ಎಂದು ಸಾಹಿತಿ ವಿದ್ಯಾ ರೆಡ್ಡಿ ಹೇಳಿದರು.

ಜಾನಪದ ಕಲಾವಿದೆ ಸುಂದರವ್ವಾ ಮಾದರ ಅವರನ್ನು ಸನ್ಮಾನಿಸಲಾಯಿತು.

ಈಶ್ವರಚಂದ್ರ ಎಸ್. ಬೇಟಗೇರಿ, ಡಾ. ಲಕ್ಷ್ಮಣ ಚೌರಿ, ಸುನಂದಾ ಪೂಜೇರಿ, ಪ್ರದೀಪ ಇಂಡಿ, ಬಸವರಾಜ ಕಡಖಬಾವಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭಾರತಿ ಜೋಕಾನಟ್ಟಿ ನಿರೂಪಿಸಿದರು. ಸರಸ್ವತಿ ಮಾದರ ವಂದಿಸಿದರು.
ಇದಕ್ಕೂ ಮುನ್ನ ಮೆರವಣಿಗೆ ನಡೆಸಲಾಯಿತು. ಜಾನಪದ ನೃತ್ಯ, ಜಾನಪದ ಸಂಗೀತ, ಜಗ್ಗಲಗಿ ಕುಣಿ, ಲಂಬಾಣಿ ಭಜನೆ, ಭಜನಾ ಪದಗಳು, ಗೀಗೀ ಪದಗಳು, ಸಂಪ್ರದಾಯ ಪದಗಳು, ಕೋಲಾಟ, ಜಾನಪದ ಸಂಗೀತ, ಸೋಬಾನ ಪದ, ಬಿಸುವಕಲ್ಲಿನ ಪದ, ಡೊಳ್ಳಿನ ಪದ, ಶಾವರಕಿ ಪದ, ಸಣ್ಣಾಟ ಪದ, ಹಲಗೆ ಮೇಲ, ಸಂಗ್ಯಾ ಬಾಳ್ಯಾ ಸಣ್ಣಾಟ, ಕರಡಿ ಮಜಲು, ಕೋಲಾಟ, ದಟ್ಟಿ ಕುಣಿತ, ತಾಸೇವಾದನ, ದೊಡ್ಡಾಟ ಪದಗಳು ಕಾರ್ಯಕ್ರಮದಲ್ಲಿ ಪ್ರದರ್ಶನಗೊಂಡವು.

https://pragati.taskdun.com/bjp-will-achieve-unprecedented-victory-with-full-majority-in-karnataka-amit-shah/
https://pragati.taskdun.com/a-young-man-shouted-slogans-of-pakistan-zindabad-in-a-crowded-area/
https://pragati.taskdun.com/the-mla-put-the-bjp-in-trouble-after-watching-a-sex-video-in-the-house/

Related Articles

Back to top button