ಪ್ರಗತಿವಾಹಿನಿ ಸುದ್ದಿ, ಪಣಜಿ(ಬಿಚೋಲಿ): ಗೋವಾದ ಬಿಚೋಲಿಯ ವಿವಿದೆಡೆ ಇರುವ ಒಟ್ಟೂ ಸುಮಾರು ೪೦೦ ಜನ ಕನ್ನಡಿಗ ಕೂಲಿ ಕಾರ್ಮಿಕರಿಗೆ ಅಖಿಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ ನೇತೃತ್ವದಲ್ಲಿ ಭಾನುವಾರದಿಂದ ಹತ್ತು ದಿನಗಳ ಕಾಲ ಮಧ್ಯಾನ್ಹಹ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.
ಮಹಾಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ, ಮಾಜಿ ಕೌನ್ಸಿನಲ್ ಭಗವಾನ್ ಹರಮಲ್‌ಕರ್, ಮುತ್ತು ವಡೆಯರ್, ಸಂತೋಷ ರಾಠೋಡ್, ಈ ನಾಲ್ವರು ಸ್ನೇಹಿತರು ಸೇರಿ ಬಿಚೋಲಿಯ ವಿವಿದೆಡೆ ಇರುವ ಕೂಲಿ ಕಾರ್ಮಿಕ ಕನ್ನಡಿಗರಿಗೆ ಹತ್ತು ದಿನಗಳ ಕಾಲ ಮಧ್ಯಾನ್ಹ ಊಟದ ವ್ಯವಸ್ಥೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಡಿವೈಎಸ್‌ಪಿ ಗುರುದಾಸ ಗಾವಡೆ ಉಪಸ್ಥಿತರಿದ್ದರು.
ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ ಅಖಿಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ- ಇಷ್ಟು ದಿನ ಈ ಕೂಲಿ ಕಾರ್ಮಿಕ ಕನ್ನಡಿಗರು ಸರ್ಕಾರವು ನೀಡುತ್ತಿದ್ದ ಕಿಚಡಿಯನ್ನು ಊಟಮಾಡುತ್ತಿದ್ದರು. ಇವರಿಗೆ ಉತ್ತಮ ಗುಣಮಟ್ಟದ ಊಟ ಲಭಿಸುವಂತಾಗಬೇಕು ಎಂಬ ಉದ್ದೇಶದಿಂದ ಅನ್ನ, ಸಾಂಬಾರ,ಉಪ್ಪಿನಕಾಯಿ,ಪಲ್ಯ ನೀಡಲಾಯಿತು. ಕೊರೊನಾ ಲಾಕ್‌ಡೌನ್ ಮುಕ್ತಾಯವಾಗುವವರೆಗೂ ಅಂದರೆ ಇನ್ನೂ ಹತ್ತು ದಿನಗಳ ಕಾಲ ಪ್ರತಿದಿನ ಸುಮಾರು ೪೦೦ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುವುದು ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ