Kannada NewsKarnataka News

ಮೊದಲ ಬಾರಿಗೆ ಗೋಕಾಕ ನಗರಸಭೆ ಬಿಜೆಪಿ ಮಡಿಲಿಗೆ

ಪ್ರಗತಿವಾಹಿನಿ ಸುದ್ದಿ, ಗೋಕಾಕ – ಗೋಕಾಕ ನಗರಸಭೆ ಮೊದಲ ಬಾರಿಗೆ ಬಿಜೆಪಿ ಮಡಿಲಿಗೆ ಸೇರುವುದು ಖಚಿತವಾಗಿದೆ.
ಶನಿವಾರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಯಲಿದೆ. ಒಟ್ಟೂ 31 ಸದಸ್ಯರ ಪೈಕಿ ಇಬ್ಬರು ಮೃತರಾಗಿದ್ದು, 29 ಸದಸ್ಯರಿದ್ದಾರೆ. ಎಲ್ಲರೂ ರಮೇಶ ಜಾರಕಿಹೊಳಿ ಪರವಾಗಿ ಜೈ ಎಂದಿದ್ದು, ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯುವುದು ಖಚಿತವಾಗಿದೆ.
 ಈಗ ಸ್ವಲ್ಪ ಹೊತ್ತಿನ ಮೊದಲು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಎಲ್ಲ ಸದಸ್ಯರ ಸಭೆ ನಡೆಸಿದ್ದಾರೆ.
ಗೋಕಾಕ ನಗರಸಭೆ ಚುನಾವಣೆಯಲ್ಲೂ ತಂತ್ರಗಾರಿಕೆ ಮಾಡಿದ್ದ ರಮೇಶ ಜಾರಿಕಿಹೊಳಿ, ಪಕ್ಷೇತರರಾಗಿಯೇ ಎಲ್ಲರನ್ನೂ ಆಯ್ಕೆ ಮಾಡಿಸಿದ್ದರು. ನಂತರ ಅವರು ಕಾಂಗ್ರೆಸ್ ನಲ್ಲಿದ್ದಾಗ ಕಾಗ್ರೆಸ್ ಗೆ ಜೈ ಎಂದಿದ್ದವರೆಲ್ಲ ಈಗ ಬಿಜೆಪಿಗೆ ಜೈ ಎನ್ನುತ್ತಿದ್ದಾರೆ.

Related Articles

Back to top button