ಮಾಜಿ ಸಿಎಂ ಸಿದ್ದರಾಮಯ್ಯ ಶಾಕಿಂಗ್ ಸ್ಟೇಟ್ ಮೆಂಟ್

ಪ್ರಗತಿವಾಹಿನಿ ಸುದ್ದಿ, ಮೈಸೂರು – ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನ ಸೋಲಿಗೆ ನಮ್ಮ ಪಕ್ಷದವರೇ ಕಾರಣ ಎಂದು ಅವರು ಹೇಳಿದ್ದಾರೆ. ನಾನು 2ನೇ ಬಾರಿಗೆ ಮುಖ್ಯಮಂತ್ರಿ ಆಗುವುದು ನಮ್ಮ ಪಕ್ಷದವರಿಗೆ ಇಷ್ಟವಿರಲಿಲ್ಲ. ಹಾಗಾಗಿ ಒಳ ಸಂಚಿನಿಂದ ನನ್ನನ್ನು ಸೋಲಿಸಿದರು ಎಂದು ಅವರು ಹೇಳಿದ್ದಾರೆ.

Home add -Advt

ಅತ್ಯಂತ ನೋವು ನೀಡಿದ ಚುನಾವಣೆ ಇದಾಗಿತ್ತು. ಇಷ್ಟು ಹೀನಾಯವಾಗಿ ನಾನು ಸೋಲುತ್ತೇನೆಂದು  ಅಂದುಕೊಂಡಿರಲಿಲ್ಲ. ಪಕ್ಷ ದ್ರೋಹ ಮಾಡಿದವರು ಆತ್ಮಾವಲೋಕನ ಮಾಡಿಕೊಂಡು ಅವರಾಗೇ ಪಕ್ಷ ಬಿಟ್ಟು ಹೋಗಲಿ. ಕಾಂಗ್ರೆಸ್ ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ ಎಂದೂ ಅವರು ಗುಡುಗಿದ್ದಾರೆ.

ಯಾರೇ ಪಕ್ಷದ್ರೋಹ ಮಾಡಿದರೂ ಸಹ ಅವರಂತಹ ಖಳನಾಯಕರು ಬೇರೆ ಯಾರೂ ಇಲ್ಲ. ನನಗಲ್ಲ, ಪಕ್ಷಕ್ಕೆ ಯಾರು ದ್ರೋಹ ಮಾಡಿದ್ದಾರೆ ಅವರು ಅವರಾಗೇ ಪಕ್ಷ ಬಿಟ್ಟು ಹೋಗಬೇಕು ಎಂದು ಅವರು ಹೇಳಿದರು.

ಜೆಡಿಎಸ್ ಮತ್ತು ಬಿಜೆಪಿ ನನ್ನನ್ನು ಸೋಲಿಸಲು ಒಳ ಒಪ್ಪಂದ ಮಾಡಿಕೊಂಡಿದ್ದವು. ಜೊತೆಗೆ  ನನ್ನ ಗೆಲುವು ನಮ್ಮ ಪಕ್ಷದವರಿಗೇ ಇಷ್ಟವಿರಲಿಲ್ಲ. ನಾನು 2ನೇ ಬಾರಿಗೆ ಸಿಎಂ ಆಗುವುದು ಅವರಿಗೆ ಬೇಕಿರಲಿಲ್ಲ. ಹಾಗಾಗಿ ಒಳ ಸಂಚು ರೂಪಿಸಿ ನನ್ನನ್ನು ಸೋಲಿಸಿದರು ಎಂದು ಅವರು ಮೈಸೂರಿನಲ್ಲಿ ಹೇಳಿದ್ದಾರೆ.

ಪಕ್ಷದ ನಾಯಕರೊಬ್ಬರನ್ನು ನೇರವಾಗಿ ಗುರಿಯಾಗಿಟ್ಟುಕೊಂಡು ಸಿದ್ದರಾಮಯ್ಯ ಹೇಳಿಕೆ ನೀಡಿದಂತಿತ್ತು.

Related Articles

Back to top button