Latest

ಗುಜರಾತ್ ಕೃಷಿ ಮತ್ತು ವಸತಿ ಮಾಜಿ ಸಚಿವ ವಲ್ಲಭಭಾಯಿ ವಘಾಸಿಯಾ ಕಾರು ಅಪಘಾತದಲ್ಲಿ ಸಾವು

ಪ್ರಗತಿವಾಹಿನಿ ಸುದ್ದಿ, ಅಮ್ರೇಲಿ: ಗುಜರಾತ್‌ನ ಕೃಷಿ ಮತ್ತು ವಸತಿ ಮಾಜಿ ಸಚಿವ ವಲ್ಲಭಭಾಯಿ ವಘಾಸಿಯಾ (69) ಅವರು ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಅವರು ಪ್ರಯಾಣಿಸುತ್ತಿದ್ದ ಕಾರು ಗುರುವಾರ ರಾತ್ರಿ ಅಮ್ರೇಲಿ ಜಿಲ್ಲೆಯ ಸಾವರಕುಂಡ್ಲಾ ಪಟ್ಟಣದ ಬಳಿ ಬುಲ್ಡೋಜರ್‌ಗೆ ಡಿಕ್ಕಿ ಹೊಡೆದು ಈ ದುರ್ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಘಾಸಿಯಾ ಅವರು ಸ್ವ ಗ್ರಾಮದಿಂದ ಸಾವರಕುಂಡ್ಲಾಗೆ ಹಿಂತಿರುಗುತ್ತಿದ್ದಾಗ ವಂಡಾ ಗ್ರಾಮದ ಬಳಿಯ ರಾಜ್ಯ ಹೆದ್ದಾರಿಯಲ್ಲಿ ರಾತ್ರಿ 8.30 ರ ಸುಮಾರಿಗೆ ಅಪಘಾತ ಸಂಭವಿಸಿದೆ. ಅವರ ಜತೆಗೆ ಕಾರಿನಲ್ಲಿದ್ದ ವ್ಯಕ್ತಿಯೊಬ್ಬರಿಗೆ ಗಾಯಗಳಾಗಿವೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಅವರನ್ನು ಕೂಡಲೆ ಆಸ್ಪತ್ರೆಗೆ ದಾಖಲಿದರೂ ಚಿಕಿತ್ಸೆ ಫಲಕಾರಿಯಾದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಘಾಸಿಯಾ ಅವರು ಸಾವರಕುಂಡ್ಲಾ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿದ್ದರು, ವಿಜಯ್ ರೂಪಾನಿ ಸರ್ಕಾರದ ಮೊದಲ ಅವಧಿಯಲ್ಲಿ ಕೃಷಿ ಮತ್ತು ನಗರ ವಸತಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.

Home add -Advt
https://pragati.taskdun.com/siddaramaiah-responded-to-the-criticism-in-a-single-tweet/
https://pragati.taskdun.com/the-new-parliament-house-will-be-inaugurated-on-may-28/
https://pragati.taskdun.com/belagavi-youth-hacked-to-death-with-weapons/

Related Articles

Back to top button