Kannada NewsKarnataka NewsUncategorized

ಬೆಳಗಾವಿಯಲ್ಲಿ ಮಳೆಯ ಅಬ್ಬರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ಕೆಲವೆಡೆ ಸೋಮವಾರ ಮಧ್ಯಾಹ್ನ ಉತ್ತಮ ಮಳೆಯಾಗುತ್ತಿದೆ.

2.15ರ ವೇಳೆಗೆ ಗುಡುಗು ಸಹಿತ ಮಳೆ ಆರಂಭವಾಗಿದ್ದು, ಈ ಸುದ್ದಿ ಪ್ರಕಟವಾಗುವ ಹೊತ್ತಿಗೂ ಮುಂದುವರಿದಿತ್ತು. ಕಳೆದ ಹಲವು ದಿನಗಳಿಂದ ಮಳೆಯ ನಿರೀಕ್ಷೆಯಲ್ಲಿದ್ದ ಜನರಿಗೆ ಮಳೆ ಖುಷಿ ತಂದಿದೆ.

Home add -Advt

ಹಲವು ದಿನಗಳಿಂದ ದಿನವೂ ಮೋಡ ಕವಿಯುತ್ತಿತ್ತಾದರೂ ಮಳೆಯಾಗುತ್ತಿರಲಿಲ್ಲ. ಆದರೆ ಸೋಮವಾರ ದಟ್ಟವಾದ ಮೋಡ ಕವಿದು ಅರ್ಧ ಗಂಟೆಯಲ್ಲೇ ಮಳೆ ಆರಂಭವಾಯಿತು. ಕೆಲ ಹೊತ್ತು ಜೋರಾಗಿಯೇ ಸುರಿಯಿತು. ಮಳೆಯೊಂದಿಗೆ ಗುಡುಗಿನ ಅಬ್ಬರವೂ ಮುಂದುವರಿದಿತ್ತು.

ಅನಿರೀಕ್ಷಿತ ಮಳೆಯಿಂದಾಗಿ ವಾಹನ ಸವಾರರು, ಪಾದಚಾರಿಗಳು, ಸಂತೆಗೆ ಬಂದಿದ್ದವರು ಸ್ವಲ್ಪ ತೊಂದರೆಗೊಳಗಾದರು.

https://pragati.taskdun.com/moka-cyclonekarnatakaheavy-rainimd-alert/

Related Articles

Back to top button