
ಪ್ರಗತಿವಾಹಿನಿ ಸುದ್ದಿ, ತುಮಕೂರು- ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಾಜಿ ಶಾಸಕ ಸುರೇಶ ಗೌಡ ಹಠಾತ್ ರಾಜಿನಾಮೆ ನೀಡಿದ್ದಾರೆ. ಜೊತೆಗೆ ರಾಜಿನಾಮೆಗೆ ಅತ್ಯಂತ ಕ್ಷುಲ್ಲಕ ಕಾರಣ ನೀಡಿದ್ದಾರೆ.
ಕೇವಲ ಒಂದೂವರೆ ವರ್ಷದ ಹಿಂದೆ ಜಿಲ್ಲಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದ ಸುರೇಶ ಗೌಡ ರಾಜಿನಾಮೆ ಜೊತೆಗೆ ಸುದೀರ್ಘ ಹೇಳಿಕೆಯನ್ನೂ ಬಿಡುಗಡೆ ಮಾಡಿದ್ದಾರೆ. ಜಿಲ್ಲಾಧ್ಯಕ್ಷ ಜವಾಬ್ದಾರಿಯಿಂದಾಗಿ ಕ್ಷೇತ್ರದ ಜನರೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ರಾಜಿನಾಮೆ ನೀಡಿದ್ದೇನೆ ಎಂದಿದ್ದಾರೆ.
2 ಬಾರಿ ತುಮಕೂರು ಗ್ರಾಮಾಂತರ ಶಾಸಕರಾಗಿ, 2 ಬಾರಿ ಜಿಲ್ಲಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಸುರೇಶ ಗೌಡ ಕಾಂಗ್ರೆಸ್ ನತ್ತ ಮುಖ ಮಾಡಿದರೇ ಎನ್ನುವ ಸುದ್ದಿ ಹರಿದಾಡುತ್ತಿದೆ. ಕ್ಷೇತ್ರದ ಜನರಿಂದಾಗಿ ಈವರೆಗೂ ರಾಜಕೀಯದಲ್ಲಿ ತಾವು ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಗಿದೆ. ಹಾಗಾಗಿ ಕ್ಷೇತ್ರದ ಜನರಿಗೆ ಕೃತಜ್ಞತೆಗಳು ಎಂದಿದ್ದಾರೆ.
ಎಲ್ಲಿಯೂ ಪಕ್ಷದ ನಾಯಕರಿಗೆ ಧನ್ಯವಾದ ಸಲ್ಲಿಸಲಿಲ್ಲ. ಮುಂದಿನ ದಿನಗಳಲ್ಲೂ ಕ್ಷೇತ್ರದ ಜನರ ಸಹಕಾರ ಇರಲಿ ಎಂದಿದ್ದಾರೆ.
ಹುಚ್ಚಗಣಿ ದೇವಸ್ಥಾನ ಪುನರ್ ನಿಮಾ೯ಣ ನನ್ನ ಜವಾಬ್ದಾರಿ – ಗ್ರಾಮಸ್ಥರಿಗೆ ಶಾಸಕ ಬಿ.ಹಷ೯ವಧ೯ನ್ ಅಭಯ