ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ – ಸೋಮವಾರ ನಡೆದ ಹುಬ್ಬಳ್ಳಿಯಲ್ಲಿ, ಕರ್ನಾಟಕ ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರಿ ಸಂಘಗಳ ಒಕ್ಕೂಟ ನಿ.,ಹುಬ್ಬಳ್ಳಿ ಇದರ ಆಡಳಿತ ಮಂಡಳಿಯ ಅಧ್ಯಕ್ಷನಾಗಿ ಅವಿರೋಧವಾಗಿ ಮಾಜಿ ಸಂಸದ ಹಾಗೂ ಜೊಲ್ಲೆ ಗ್ರೂಪ್ ನ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ ಮತ್ತು ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಅಕ್ಕಿ ಅವರು ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ಬಳಿಕ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ ಚುನಾವಣೆಯಲ್ಲಿ ಅಧ್ಯಕ್ಷನಾಗಿ ಆಯ್ಕೆಯಾಗಲು ನನಗೆ ಸಹಕಾರ ನೀಡಿದ ಎಲ್ಲ ನಿರ್ದೇಶಕ ಮಂಡಳಿ ಸದಸ್ಯರಿಗೆ ತುಂಬು ಹೃದಯದ ಧನ್ಯವಾದಗಳು ತಿಳಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿರ್ದೇಶಕ ಮಂಡಳಿ ಸದಸ್ಯರಾದ ಪ್ರಭಾಕರ ಡಬ್ಬನ್ನವರ, ದೀಪಕ ಪಾಟೀಲ, ಬಿ.ಟಿ.ಬೆನಕಟ್ಟಿ, ಹನುಮಂತಗೌಡ ಪಾಟೀಲ, ದಯಾನಂದ ಅಲಗೌಂಡ, ಜಗದೀಶ ತಂಬಾಕದ, ಟಿ.ಎಸ್.ಪಾಟೀಲ, ಎಂ.ಬಿ.ಪಾಟೀಲ, ಎಫ್.ಎಚ್.ಅಗಸಿಮನಿ, ವ್ಯವಸ್ಥಾಪಕ ನಿರ್ದೇಶಕರಾದ ಎಲ್.ಶಿವಪ್ರಕಾಶ ಉಪಸ್ಥಿತರಿದ್ದರು.
ಹುಬ್ಬಳ್ಳಿ ತಹಶೀಲ್ದಾರರಾಗಿ ಹಾಗೂ ಚುನಾವಣೆ ಅಧಿಕಾರಿಯಾಗಿ ಪ್ರಕಾಶ ನಾಶಿ ಕಾರ್ಯನಿರ್ವಹಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ