
ಪ್ರಗತಿವಾಹಿನಿ ಸುದ್ದಿ: ಸಾಲಬಾಧೆ ತಾಳಲಾರದೇ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದು, ಇಬ್ಬರು ಸಾವನ್ನಪ್ಪಿ ಇಬ್ಬರು ಬಚಾವ್ ಆಗಿದ್ದಾರೆ.
ರಾಜಧಾನಿ ಬೆಂಗಳೂರಲ್ಲಿ ದೇವನಹಳ್ಳಿಯ ಹೆಗ್ಗನಹಳ್ಳಿಯಲ್ಲಿ ಘಟನೆ ನಡೆದಿದೆ. 45 ವರ್ಷದ ಕುಮಾರಪ್ಪ, 30 ವರ್ಷದ ಅರುಣ್ ಮೃತ ದುರ್ದೈವಿಗಳಾಗಿದ್ದಾರೆ. ರಮಾ ಹಾಗೂ ಅಕ್ಷಯ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಾಲ್ಕು ಜನರಲ್ಲಿ ಇಬ್ಬರು ಮನೆಯಲ್ಲೇ ಸಾವನ್ನಪ್ಪಿದ್ದಾರೆ ಉಳಿದ ಇಬ್ಬರನ್ನ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಇಬ್ಬರು ಬಚಾವ್ ಆಗಿದ್ದಾರೆ.
ಇಡೀ ಕುಟುಂಬ ಸಾಲದ ಸುಳಿಯಲ್ಲಿ ಸಿಲುಕಿತ್ತು. ಬಡ್ಡಿ ಕಟ್ಟಲಾಗದೆ ಜೀವನ ನಿರ್ವಹಣೆಯೇ ಕಷ್ಟವಾಗಿತ್ತು. ಇದ್ರಿಂದ ಎಲ್ಲರೂ ಬೇಸತ್ತು ಸೂಸೈಡ್ ಗೆ ಯತ್ನಿಸಿದ್ದಾರೆ. ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
 
					 
				 
					 
					 
					 
					
 
					 
					 
					


