Kannada NewsKarnataka NewsNational

*ಕಾಡಾನೆ ದಾಳಿಗೆ ನಾಲ್ವರು ಬಲಿ*

ಪ್ರಗತಿವಾಹಿನಿ ಸುದ್ದಿ: ಕಾಡಾನೆ ದಾಳಿಗೆ ಒಂದೇ ಕುಟುಂಬದ ಮೂವರು ಸೇರಿದಂತೆ ಒಟ್ಟು ನಾಲ್ಕು ಮಂದಿ ಸಾವನ್ನಪ್ಪಿದ ಘಟನೆ ಛತ್ತೀಸ್‌ಘಡದ ಕೊರ್ಬಾ ಜಿಲ್ಲೆಯಲ್ಲಿ ತಡ ರಾತ್ರಿ ನಡೆದಿದೆ

ಕಾಡಾಣೆ ಮೂವರನ್ನು ತುಳಿದು ಸಾಯಿಸುವ ಮೊದಲು ಸೋನಿ ಅವರ ಮನೆಯ ಗೋಡೆಗೆ ಹಾನಿ ಮಾಡಿತು. ಅವರ ಕಿರುಚಾಟ ಕೇಳಿ ನೆರೆಮನೆಯ ಕುಜೂ‌ರ್ ಸ್ಥಳಕ್ಕೆ ಧಾವಿಸಿದಾಗ ಅವರನ್ನು ಆನೆ ತುಳಿದೆ ಎನ್ನಲಾಗಿದೆ. ಮೃತರನ್ನು ರಾಮಕೇಶ್ವರ್ ಸೋನಿ (35), ಅವರ ಮಗಳು ರವಿತಾ (9), ಅವರ ಸಹೋದರ ಅಜಯ್ (25) ಮತ್ತು ಅವರ ನೆರೆಹೊರೆಯವರಾದ ಅಶ್ವಿನ್ ಕುಜೂರ್ (28) ಎಂದು ಗುರುತಿಸಲಾಗಿದೆ. 

ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯ ಗೀಚಾ ನಗರ ಪಂಚಾಯತ್‌ಗೆ ನುಗ್ಗಿದೆ ಎಂದು ವಿಭಾಗೀಯ ಅರಣ್ಯಾಧಿಕಾರಿ ಜಶ್‌ಪುರ ವಿಭಾಗದ ಜಿತೇಂದ್ರ ಉಪಾಧ್ಯಾಯ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಗ್ರಾಮದ ನಿವಾಸಿಯೊಬ್ಬರು ಮಾತನಾಡಿ, ನಮ್ಮ ಗ್ರಾಮಕ್ಕೆ ಆನೆ ಪ್ರವೇಶದ ಬಗ್ಗೆ ನಮಗೆ ತಿಳಿದಿರಲಿಲ್ಲ. ವಿದ್ಯುತ್ ಸರಬರಾಜು ಇರಲಿಲ್ಲ . ಆನೆಯು ಮನೆಗೆ ಹಾನಿ ಮಾಡಿತು ಮತ್ತು ನಾಲ್ವರನ್ನು ಸಾಯಿಸಿದೆ ಎಂದು ತಿಳಿಸಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button