Election NewsKannada NewsKarnataka NewsNationalPolitics

*ಟಿಕೆಟ್ ಕೊಡಿಸುವದಾಗಿ ಪ್ರಲ್ಹಾದ ಜೋಶಿ ಸೋದರನಿಂದ ವಂಚನೆ: ದೂರು ದಾಖಲು*

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ ಆರೋಪದ ಮೇಲೆ ಕೇಂದ್ರ ಸಚಿವ ಪ್ರಲ್ಲಾದ್ ಜೋಶಿ ಸೋದರನ ವಿರುದ್ಧ ದೂರು ದಾಖಲಾಗಿದೆ. 

ಬಿಜಾಪುರ ಕ್ಷೇತ್ರದ ಟಿಕೆಟ್ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ್ದಾರೆಂದು ಮಾಜಿ ಶಾಸಕ ದೇವಾನಂದ್‌ ಚೌವ್ಹಾಣ್ ಪತ್ನಿ ಸುನಿತಾ ಚೌಹ್ವಾಣ್ ದೂರು ದಾಖಲಿಸಿದ್ದಾರೆ. ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಲ್ಲಾದ್ ಜೋಶಿ ಸೋದರ ಗೋಪಾಲ ಜೋಶಿ ವಿರುದ್ದ ದೂರು ಎಫ್‌ಐಆರ್ ದಾಖಲಾಗಿದೆ. ಪ್ರಲ್ಲಾದ್ ಜೋಶಿ ಸೋದರ ಗೋಪಾಲ್ ಜೋಶಿ, ಪುತ್ರ ಅಜಯ್ ಜೋಶಿ ಹಾಗೂ ಸಂಬಂಧಿಕರಾದ ವಿಜಯಲಕ್ಷ್ಮಿ ಅವರು ತನ್ನಿಂದ 1.75 ಕೋಟಿ ರೂ. ಹಣ ಪಡೆದು ವಂಚಿಸಿದ್ದಾರೆಂದು ಸುನಿತಾ ಚೌಹ್ವಾಣ್ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ ಹಣವನ್ನು ವಾಪಸ್ ಕೇಳಿದ್ದಕ್ಕೆ ತನ್ನ ಮೇಲೆ ಜಾತಿ ನಿಂದನೆ ಮಾಡಿದ್ದಲ್ಲದೇ, ಹಲ್ಲೆ ಬೆದರಿಕೆಯನ್ನೂ ಹಾಕಿದ್ದಾರೆಂದು ಸುನಿತಾ ದೂರಿನಲ್ಲಿ ವಿವರಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ತಮ್ಮ ಪತಿ ದೇವಾನಂದ ಪುಲ್ ಸಿಂಗ್ ಚೌಹ್ಹಾಣ್ ಅವರಿಗೆ ಪ್ರಹ್ಲಾದ್ ಜೋಷಿ ಪ್ರಭಾವ ಬಳಸಿ  ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರ ಸಹೋದರ ಗೋಪಾಲ ಜೋಷಿ ಮತ್ತು ಸಹೋದರಿ ವಿಜಯ್ ಲಕ್ಷ್ಮಿ ಜೋಷಿ ಹಾಗೂ ಗೋಪಾಲ್ ಜೋಷಿ ಮಗ ಅಜಯ್ ಜೋಷಿ ಭರವಸೆ ನೀಡಿ ಎರಡು ಕೋಟಿ ರೂಪಾಯಿ ಪಡೆದು ಟಿಕೆಟ್ ಕೊಡಿಸದೆ, ಹಣವನ್ನು ವಾಪಸ್ ನೀಡದೆ ಮೋಸ ಮಾಡಿದ್ದಾರೆ, ದುಡ್ಡು ವಾಪಾಸ್ ಕೇಳಿದಾಗ ಗೂಂಡಾಗಳಿಂದ ಬೆದರಿಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಸುನೀತಾ ಚೌಹ್ಹಾಣ್ ಅವರು  ಪೊಲೀಸರಿಗೆ ದೂರು ನೀಡಿದ್ದಾರೆ.

ಲಂಬಾಣಿ ಸಮುದಾಯಕ್ಕೆ ಸೇರಿರುವ ದೇವಾನಂದ್ ಸಿಂಗ್ ಅವರು 2018ರಲ್ಲಿ ಬಿಜಾಪುರ ಜಿಲ್ಲೆಯ ನಾಗಠಾಣದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಗೆದ್ದಿದ್ದರು. 2023ರಲ್ಲಿ ಸೋತಿದ್ದರು. ಸುನೀತಾ ಚೌಹ್ಹಾಣ್ ಅವರಿಂದ ಮೊದಲು 25 ಲಕ್ಷ ಪಡೆದಿದ್ದ ಗೋಪಾಲ್ ಜೋಷಿ  “”ಆ ಹಣವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಹಾ ಅವರ ಸೆಕ್ರೆಟರಿಗೆ ನೀಡಿದ್ದು ನನ್ನ ತಮ್ಮ ಪ್ರಹ್ಲಾದ್ ಜೋಷಿನ ವರ್ಚಸ್ಸು ಚೆನ್ನಾಗಿದೆ, ಅವನ ಮಾತನ್ನು ನರೇಂದ್ರ ಮೋದಿ ಮತ್ತು ಅಮಿತ್ ಶಾ ಇಬ್ಬರೂ ಕೇಳುತ್ತಾರೆ, ಟಿಕೆಟ್ ಗ್ಯಾರಂಟಿ’’ ಎಂದು ಭರವಸೆ ನೀಡಿದ್ದರಂತೆ ಟಿಕೆಟ್ ಸಿಗದೆ ಇದ್ದಾಗ ದುಡ್ಡು ವಾಪಸ್ ಕೇಳಲು ಹೋದರೆ ‘’ ನನಗೆ 200 ಕೋಟಿ ರೂಪಾಯಿಗಳ ಪ್ರಾಜೆಕ್ಟ್ ಬಿಲ್ ಬರಲಿದೆ ಎಂದು ಸದ್ಯಕ್ಕೆ 1ಕೋಟಿ 75 ಲಕ್ಷ ಕೊಡಿ ನಂತರ ಎಲ್ಲ ಹಣ ವಾಪಸ್ ಕೊಡುತ್ತೇನೆ ಎಂದು ನನ್ನನ್ನು ನಂಬಿಸಿ ಒಟ್ಟು ಎರಡು ಕೋಟಿ ರೂಪಾಯಿ ಪಡೆದು ಗೋಪಾಲ್ ಜೋಷಿ ಅವರ ಮಗ ಅಜಯ್ ಸಿಂಗ್ ಹಾಗೂ ವಿಜಯ್ ಲಕ್ಷ್ಮೀ ಅವರು ವಂಚಿಸಿದ್ದಾರೆ. ‌ಅದರ ನಂತರ ದುಡ್ಡ ವಾಪಸ್ ಕೇಳಲು ಹೊರಟರೆ ವಿಜಯ್ ಲಕ್ಷ್ಮಿ ಮತ್ತು ಅಜಯ್ ಜೋಷಿ ಗೂಂಡಾಗಳಿಂದ ಹಲ್ಲೆ ಮಾಡಿಸಿದ್ದಲ್ಲದೆ ಜಾತಿ ನಿಂದನೆ ಕೂಡಾ ಮಾಡಿದ್ದಾರೆ ಎಂದು ಸುನೀತಾ ಚೌಹ್ಹಾಣ್ ದೂರಿನಲ್ಲಿ ತಿಳಿಸಿದ್ದಾರೆ.

ನೊಂದ ಮಹಿಳೆ ಸುನೀತಾ ಚೌಹ್ಹಾಣ್ ಅವರು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಹ್ಲಾದ್ ಜೋಷಿ ಸೋದರ ಗೋಪಾಲ ಜೋಷಿ, ಸೋದರಿ ವಿಜಯಲಕ್ಷ್ಮಿ ಮತ್ತು ಗೋಪಾಲ ಜೋಷಿ ಮಗ ಅಜಯ್ ಜೋಷಿ ವಿರುದ್ದ ದೂರು ನೀಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button