Karnataka NewsLatest

ಉಚಿತ ಬ್ಯಾಂಕಿಂಗ್ ತರಬೇತಿ ಶಿಬಿರ ಮುಕ್ತಾಯ

ಉಚಿತ ಬ್ಯಾಂಕಿಂಗ್ ತರಬೇತಿ ಶಿಬಿರ ಮುಕ್ತಾಯ

 

ಪ್ರಗತಿವಾಹಿನಿ ಸುದ್ದಿ, ಅಥಣಿ-

ಸಮಾಜಪರ ಕೆಲಸ ಮಾಡುವವರು ಇತಿಹಾಸವಾಗಿ ಉಳಿಯುತ್ತಾರೆ, ಇತಿಹಾಸವಾದವರು ಸದಾಕಾಲ ಜನರ ನೆನೆಪಿನಲ್ಲಿ ಇರುತ್ತಾರೆ. ಅಂತಹ ನೆನಪಿನಲ್ಲಿ ಉಳಿಯುವಂತ ಸಮಾಜಪರ ಕೆಲಸವನ್ನು ಸಹಾಯ ಫೌಂಡೇಶನ್  ಮಾಡುತ್ತಿದೆ ಎಂದು ಅಥಣಿ ಗಚ್ಚಿನ ಮಠದ ಶ್ರೀ ಶಿವಬಸವ ಮಹಾಸ್ವಾಮಿಗಳು ಹೇಳಿದರು.
ಅವರು ಸ್ಥಳೀಯ ಶ್ರೀ ಶೆಟ್ಟರ ಮಠದ ಆವರಣದಲ್ಲಿ ಸಹಾಯ ಫೌಂಡೇಶನ್ ವತಿಯಿಂದ ನಡೆದ ಉಚಿತ ಬ್ಯಾಂಕಿಂಗ್ ತರಬೇತಿ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದರು.

ಭವ್ಯ ಭಾರತದ ಭವಿಷ್ಯ ನಿರ್ಮಾಣದಲ್ಲಿ ಯುವಕರ ಪಾತ್ರ ಪ್ರಮುಖವಾಗಿದ್ದು, ಅಂತಹ ಯುವಕರ ಬಾಳಿಗೆ ಆಧಾರವಾದ ನೌಕರಿ ಹಿಡಿಯಲು ಮುಖ್ಯವಾಗಿ ಬೇಕಾದ ಬ್ಯಾಂಕಿಂಗ್ ತರಬೇತಿಯನ್ನು ಉಚಿತವಾಗಿ ನೀಡಿ ಅವರ ಬದುಕನ್ನು ಕಟ್ಟಿಕೊಳ್ಳಲು ನೈಜವಾದ ಸೇವೆ ಸಲ್ಲಿಸುತ್ತಿರುವ ಸಹಾಯ ಫೌಂಡೇಶನ್ ಕಾರ್ಯ ಶ್ಲಾಘನೀಯ ಹಾಗೂ ಪ್ರವಾಹ ಸಂದರ್ಭದಲ್ಲಿ ಸುಮಾರು ಐದಾರು ದಿನಗಳ ಕಾಲ ಸಂತ್ರಸ್ತರ ಸೇವೆ ಮಾಡಿದ್ದು ಕೂಡ ನೆನೆಸುವಂತಾಗಿದೆ ಎಂದರು.

ಸಹಾಯ ಪೌಂಡೇಶನ್ ವತಿಯಿಂದ ನಡೆದ ಉಚಿತ ಬ್ಯಾಂಕಿಂಗ್ ತರಬೇತಿ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಪಾಲ್ಗೊಂಡ ಗಣ್ಯರಿಗೆ ಸತ್ಕರಿಸಿದ ಚಿತ್ರ

ನಂತರ ಮಾತನಾಡಿದ ಮಾಜಿ ಜಿ.ಪಂ ಸದಸ್ಯ ಬಸವರಾಜ ಬುಟಾಳಿ ಅವರು, ಸಮಾಜ ಸೇವೆಯಲ್ಲಿಯೇ ದೇವರ ಸೇವೆಯೆಂದು ದೇವರನ್ನು ಕಂಡುಕೊಂಡು ಸಂಪೂರ್ಣವಾಗಿ ಸಾಮಾಜಿಕ ಸೇವೆಯನ್ನು ಉಸಿರಾಗಿಸಿಕೊಂಡ ಯುವಕರ ಸಹಾಯ ಫೌಂಡೇಶನ್ ಶ್ಲಾಘಿಸುವಂತದ್ದು. ಇಂತಹ ಸ್ಪೂರ್ತಿದಾಯಕ ಸಂಘಗಳು ಇನ್ನೂ ಹೆಚ್ಚೆಚ್ಚು ಬೆಳೆಯಲಿ ಎಂದರು.
ನಂತರ ಮಾತನಾಡಿದ, ಯುವ ಉದ್ದಿಮೆದಾರ ಸಂತೋಷ ಸಾವಡಕರ ಅವರು ಯಾವುದೇ ಫಲಾಪೇಕ್ಷೇ ಇಲ್ಲದೇ ನಿಸ್ವಾರ್ಥವಾಗಿ ಸಾಮಾಜಿಕ ಸೇವೆಯನ್ನು ಅದರಲ್ಲೂ ಪ್ರವಾಹ ಸಂತ್ರಸ್ತರ ಸೇವೆ ಹಾಗೂ ಉದ್ಯೋಗಕ್ಕಾಗಿ ಉಚಿತ ತರಬೇತಿ ಎಂಬುದು ವಿಶಿಷ್ಠ, ವಿನೂತನ ಪ್ರಯೋಗವಾಗಿದ್ದು, ಇಂತಹ ಕಾರ್ಯಕ್ಕೆ ನಮ್ಮೆಲ್ಲರ ಬೆಂಬಲವಿದ್ದು, ಧೈರ್ಯದಿಂದ ಮುನ್ನುಗ್ಗಿ ಎಂದು ಕರೆಕೊಟ್ಟರು.
ಆನಂತರದಲ್ಲಿ ಜಮಖಂಡಿಯ ಸಿ.ಎ ಕೋಚಿಂಗ್ ಕ್ಲಾಸಿನ ಬಸವರಾಜ ಬಾಗೇವಾಡಿ, ಚಾಣಕ್ಯ ರತ್ನ ಕೋಚಿಂಗ್ ಸೆಂಟರಿನ ನಾಗರಾಜ ಮಜ್ಜಗಿ, ಸಹಾಯ ಫೌಂಡೇಶನ್ ಕಾರ್ಯದರ್ಶಿ ಸಂತೋಷ ಬಡಕಂಬಿ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರರಾದ ಧರೆಪ್ಪಾ ಠಕ್ಕಣ್ಣವರ, ರಾಜು ಅಲಬಾಲ, ಜೆಡಿಎಸ್ ಬ್ಲಾಕ್ ಅಧ್ಯಕ್ಷ ಶ್ರೀಶೈಲ ಹಳ್ಳದಮಳ, ನಿಶಾಂತ ದಳವಾಯಿ, ಪ್ರದೀಪ ಜಾಧವ, ಎಸ್ ಕೆ ಹೊಳೆಪ್ಪನವರ, ಚಿದಾನಂದ ಪಾಟೀಲ, ಶ್ರೀಶೈಲ ಮೇತ್ರಿ, ಪರಶುರಾಮ ಬಾಸಿಂಗಿ, ಮಾಳಪ್ಪಾ ಪೂಜಾರಿ, ನಾಗರಾಜ ಬೆಳ್ಳಂಕಿ, ಸಚಿನ ಅವಟಿ, ಗೀತಾ ಮಾಳಿ, ಪ್ರೇಮಾ ಬುಟಾಳಿ, ಶ್ರುತಿ ಬಡಚಿ, ರವಿ ಬಡಕಂಬಿ, ಯಶೋಧಾ ಕರೋಲಿ, ವಿದ್ಯಾ ಬಿರಾದಾರ, ಪರಶುರಾಮ ನಂದೇಶ್ವರ, ಸಂತೋಷ ಪವಾರ, ಸಚಿನ ಮಾಳಿ, ಸುಜಾತ ಕೋಕಣೆ, ಅಮೀತ ಬಡಿಗೇರ, ತುಕಾರಾಮ ವಂಜಾರೆ, ಮಂಜುನಾಥ ಸವದತ್ತಿ, ಸಂತೋಷ ಮಾಕಾನಿ, ರಾಕೇಶ ಗೊಟ್ಟಿ, ಅಭೀಷೆಕ ಚವ್ಹಾನ, ಅನೀತಾ ತೇಲಿ, ಸಾವಿತ್ರಿ ಅಂಬಿ, ದೀಪಾ ತೋಟಕ ಹಾಗೂ ಮತ್ತಿತ್ತರು ಉಪಸ್ಥಿತರಿದ್ದರು.
ಶಶಿಧರ ಬರ್ಲಿ ಸ್ವಾಗತಿಸಿ ನಿರೂಪಿಸಿದರು, ಚಂದ್ರಶೇಖರ ರೋಖಡಿ ವಂದಿಸಿದರು.

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button