
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ದೂರದರ್ಶನ ನಗರದ ಸಂಸ್ಕೃತಿ ಮಹಿಳಾ ಮಂಡಳ ಹಾಗೂ ರಡ್ಡಿ ಮಹಿಳಾ ಮಂಡಳದ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.
ಯೂನಿಕೇರ್ ಆಸ್ಪತ್ರೆಯ ವೈದ್ಯರಾದ ಪವನ್ ಅಲ್ ಕುಂಟೆ, ಮುಕ್ತ ಪವನ್ ಅಲ್ ಕುಂಟೆ ಹಾಗೂ ವಿನೋದ್ ಹಳ್ಳಿ ಗೌಡರ ಭಾಗವಹಿಸಿದ್ದರು. ಪವನ್ ಅಲ್ಕುಂಟೆ ಮಾತನಾಡಿ, ಸಾಮಾನ್ಯವಾಗಿ ವಯಸ್ಕರಲ್ಲಿ ತಲೆದೋರುವಂತ ಕೀಲು ಹಾಗೂ ಮೂಳೆಯ ಸಮಸ್ಯೆಗಳ ಬಗ್ಗೆ ವಿವರಿಸಿದರು. ಪ್ರತಿಯೊಬ್ಬರೂ ದಿನ ನಿತ್ಯ ಮಾಡಲೇಬೇಕಾದ ಯೋಗಾಸನಗಳ ಬಗ್ಗೆ ಮತ್ತು ಮೂಳೆಯ ಸವೆತ ಹಾಗೂ ಅದರ ಶಸ್ತ್ರ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು.

ಮುಕ್ತ ಅವರು ಹೆಣ್ಣು ಮಕ್ಕಳು ವಯಸ್ಸಿನ ಅನುಗುಣವಾಗಿ ಯಾವ ಯಾವ ರೀತಿ ಬದಲಾವಣೆಗಳನ್ನು ಕಾಣುತ್ತಾರೆ ಹಾಗೂ ಯಾವ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂಬುದನ್ನು ತಿಳಿಸಿದರು ಹಾಗೂ ವಹಿಸಬೇಕಾದ ಕಾಳಜಿ ಕುರಿತು ತಿಳಿಸಿದರು.
ವಿನೋದ್ ಹಳ್ಳಿಗುಡಿ ಮಾತನಾಡುತ್ತ, ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ವಿವರಿಸಿದರು ಹಾಗೂ ಹೃದಯಾಘಾತದ ಬಗ್ಗೆ ಮುಂಜಾಗ್ರತಿಯನ್ನು ಹೇಗೆ ವಹಿಸಬೇಕೆಂದು ತಿಳಿಸಿದರು.
ಉಚಿತವಾಗಿ ಸೇವೆಯನ್ನು ಸಲ್ಲಿಸಿದ ಎಲ್ಲಾ ವೈದ್ಯರುಗಳನ್ನು ಸನ್ಮಾನಿಸಲಾಯಿತು. ಸಾಹಿತಿಯಾಗಿ, ಕವಿತ್ರಿಯಾಗಿ, ವಿಮರ್ಶಕಿಯಾಗಿ ಅನೇಕ ಪ್ರಶಸ್ತಿಗಳನ್ನು ಪಡೆದ ಸುಧಾ ಪಾಟೀಲ ಅವರನ್ನು ಹಾಗೂ ನಾಗನೂರು ರುದ್ರಾಕ್ಷಿಮಠದಿಂದ ಸೇವಾ ರತ್ನ ಪ್ರಶಸ್ತಿ ಪಡೆದ ಕಾವೇರಿ ಕಿಲಾರಿ ಅವರನ್ನು ಸನ್ಮಾನಿಸಲಾಯಿತು.
ಸಂಸ್ಕೃತಿ ಮಹಿಳಾ ಮಂಡಳದ ಅಧ್ಯಕ್ಷರಾದ ಸುನಿತಾ ಸುರೇಶ್ ಅವರು ಸ್ವಾಗತಿಸಿದರು. ರಡ್ಡಿ ಸಂಘದ ಹೇಮರೆಡ್ಡಿ ಮಲ್ಲಮ್ಮ ಮಹಿಳಾ ಮಂಡಳದ ಅಧ್ಯಕ್ಷರಾದ ಶಾಂತಾ ಜಂಗಲ, ಕಾರ್ಯದರ್ಶಿ ಲತಾ ಅರಕೇರಿ, ವಿಜಯಲಕ್ಷ್ಮಿ ಮಂಟೂರ ಹಾಗೂ ಸಂಸ್ಕೃತಿ ಮಹಿಳಾ ಮಂಡಳದ ಕಾರ್ಯದರ್ಶಿ ಅರಕೇರಿ, ವಿಜಯಲಕ್ಷ್ಮಿ ಮಂಟೂರ ಹಾಗೂ ಸಂಸ್ಕೃತಿ ಮಹಿಳಾ ಮಂಡಳದ ಕಾರ್ಯದರ್ಶಿ ಅನುಶ್ರೀ ದೇಶಪಾಂಡೆ, ಸುವರ್ಣ ಶೆಟ್ಟರ್ ಹಾಗೂ ಖಜಾಂಚಿ ಪ್ರತಿಭಾ ಸಿದ್ಧಪ್ಪ ಗೌಡರ ಉಪಸ್ಥಿತರಿದ್ದರು. ಸಂಗೀತ ಕುಲಕರ್ಣಿ ಹಾಗೂ ರೋಹಿಣಿ ಪಾಟೀಲ ನಿರೂಪಣೆ ಮಾಡಿದರು. ಅನುಶ್ರೀ ದೇಶಪಾಂಡೆ ವಂದಿಸಿದರು.




