Kannada NewsKarnataka NewsLatest

ಬೆಳಗಾವಿ-ಕಿತ್ತೂರು -ಧಾರವಾಡ ನೇರ ರೈಲು ಸಂಪರ್ಕಕ್ಕೆ ಉಚಿತ ಭೂಮಿ -ಯಡಿಯೂರಪ್ಪ ಭರವಸೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು -ಬಹುಕಾಲದ ಬೇಡಿಕೆಯಾದ ಬೆಳಗಾವಿ -ಕಿತ್ತೂರು-ಧಾರವಾಡ ನೇರ ರೈಲು ಸಂಪರ್ಕ ಕಲ್ಪಿಸುವ ಸಂಬಂಧ ಕರ್ನಾಟಕ ಸರಕಾರ ಮತ್ತು ಕೇಂದ್ರ ರೈಲ್ವೆ ಇಲಾಖೆ ಮಧ್ಯೆ ಮಹತ್ವದ ಚರ್ಚೆ ನಡೆಯಿತು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ರಾಜ್ಯದ ಇನ್ನೂ ಹಲವಾರು ರೈಲ್ವೆ ಯೋಜನೆಗಳ ಕುರಿತೂ ಚರ್ಚಿಸಲಾಯಿತು.

ಬೆಳಗಾವಿ -ಧಾರವಾಡ ರೈಲ್ವೆ ಲೈನ್ ಕಾಮಗಾರಿಗೆ ಅಗತ್ಯವಾದ ಭೂಮಿಯನ್ನು ಉಚಿತವಾಗಿ ನೀಡಲು ಮುಖ್ಯಮಂತ್ರಿ ಯಡಿಯೂರಪ್ಪ ಒಪ್ಪಿರುವುದಾಗಿ ಸುರೇಶ ಅಂಗಡಿ ಟ್ವೀಟ್ ಮಾಡಿದ್ದಾರೆ.

ಪ್ರಸ್ತುತ ಧಾರವಾಡದಿಂದ ರೈಲ್ವೆ ಲೋಂಡಾ, ಖಾನಾಪುರ ಮೂಲಕ ಸಂಚರಿಸುತ್ತಿದೆ. ಇದು ಅನಗತ್ಯ ವಿಳಂಬಕ್ಕೆ ಕಾರಣವಾಗುತ್ತಿದೆ. ಹಾಗಾಗಿ ಬೆಂಗಳೂರಿಗೆ ತೆರಳುವ ಬಹುಪಾಲು ಬೆಳಗಾವಿ ಪ್ರಯಾಣಿಕರು ಧಾರವಾಡದವರೆಗೆ ರಸ್ತೆ ಮೂಲಕ ಸಂಚರಿಸುತ್ತಿದ್ದಾರೆ. ನೇರ ರೈಲು ಸಂಚರಿಸುವುದರಿಂದ ಸಮಯ ಉಳಿತಾಯವಾಗಲಿದೆ.

ಬೆಳಗಾವಿ -ಕಿತ್ತೂರು -ಧಾರವಾಡ ರೈಲ್ವೆ ಲೈನ್ ಸಮೀಕ್ಷೆ ಕಾರ್ಯ ಈಗಾಗಲೆ ನಡೆಯುತ್ತಿದೆ. ಕಿತ್ತೂರು ಮತ್ತು ಹಿರೇಬಾಗೇವಾಡಿಯಲ್ಲಿ ರೈಲ್ವೆ ನಿಲುಗಡೆ ಪ್ರಸ್ತಾವನೆ ಇದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button