Belagavi NewsBelgaum NewsKannada NewsKarnataka NewsNational
ಪ್ರಭಾಕರ ಕೋರೆ ಜನ್ಮ ದಿನದ ಅಂಗವಾಗಿ ರೋಗಿಗಳಿಗೆ ಉಚಿತ ಚಿಕಿತ್ಸೆ: ಡಾ. ಕರ್ನಲ್ ಎಂ. ದಯಾನಂದ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೆಎಲ್ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ 77ನೇ ಜನ್ಮ ದಿನದ ಅಂಗವಾಗಿ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಿಂದ 100 ರೋಗಿಗಳಿಗೆ ಉಚಿತ ಎಂಜಿಯೊಗ್ರಾಫಿ ಮತ್ತು ಆಯ್ದ 25 ಜನರಿಗೆ ಆಂಜಿಯೋಪ್ಲ್ಯಾಸ್ಟಿ ಮಾಡಲಿದ್ದೇವೆ ಎಂದು ಕೆಎಲ್ಇ ವೈದ್ಯಕೀಯ ಆಸ್ಪತ್ರೆಯ ನಿರ್ದೇಶಕ ಡಾ. ಕರ್ನಲ್ ಎಂ. ದಯಾನಂದ ಹೇಳಿದರು.
ಸೋಮವಾರ ಕೆಎಲ್ಇ ಆಸ್ಪತ್ರೆಯಲ್ಲಿ ಮಾಧ್ಯಮಗೊಷ್ಠಿ ನೇರವೆರಿಸಿ ಮಾತನಾಡಿದ ಅವರು ಆರ್ಥಿಕವಾಗಿ ಹಿಂದುಳಿದ ಹಾಗೂ ಸರಕಾರದ ಯಾವುದೇ ವೈದ್ಯಕೀಯ ಯೋಜನೆಗೊಳಪಡದ 100 ರೋಗಿಗಳಿಗೆ ಉಚಿತ ಎಂಜಿಯೊಗ್ರಾಫಿ ಮತ್ತು ಆಯ್ದ 25 ಜನರಿಗೆ ಆಂಜಿಯೋಪ್ಲ್ಯಾಸ್ಟಿ ನೆರವೆರಿಸಲಾಗುತ್ತಿದೆ ಎಂದು ತಿಳಿಸಿದರು.
ಹೃದಯ ರೋಗ ಹೆಚ್ಚಾಗಿ ಬೆಳೆಯುತ್ತಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧವರೆಗೂ ಹೃದಯಾಘಾತವಾಗುತ್ತಿದೆ. ಕೋವಿಡ್ ಬಳಿಕ ಅತ್ಯಧಿಕವಾಗಿ ಹೃದಯ ರೋಗ ಬರುತ್ತಿವೆ ಎಂದರು