Belagavi NewsBelgaum NewsKannada NewsKarnataka NewsLatestSports

*ಉಚಿತ ವಾಲಿಬಾಲ್ ಕ್ರೀಡಾ ತರಬೇತಿ ಶಿಬಿರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಳಗಾವಿ ವತಿಯಿಂದ ವಾಲಿಬಾಲ್ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ ಕ್ರೀಡಾಪಟುಗಳಿಗೆ ಏಪ್ರಿಲ್ 15 2026ರಿಂದ ಮೇ. 7 2026 ರವರೆಗೆ ಅಥಣಿ ಪಟ್ಟಣದ ಭೋಜರಾಜ ಕ್ರೀಡಾಂಗಣದಲ್ಲಿ ಉಚಿತ ವಾಲಿಬಾಲ್ ಕ್ರೀಡಾ ತರಬೇತಿ ಶಿಬಿರವನ್ನು ಆಯೋಜಿಸಲಾಗಿರುತ್ತದೆ.

ಆಸಕ್ತ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಳ್ಳಬಹುದು. ಹೆಚ್ಚಿನ ವಿವರಗಳಿಗಾಗಿ ವಾಲಿಬಾಲ್ ತರಬೇತಿದಾರ ಎನ್.ಎ. ಮೀರಜಕರ್ ಇವರ ದೂರವಾಣಿ ಸಂಖ್ಯೆ 9379744731, 7022061993, 9008813161 ಗೆ ಸಂಪರ್ಕಿಸಬಹುದಾಗಿದೆ ಎಂದು ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

Related Articles

Back to top button