ಪ್ರಗತಿವಾಹಿನಿ ಸುದ್ದಿ, ಬೆಳಗಾವಿ- ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಬೆಳಗಾವಿಯಲ್ಲಿ ಕನ್ನಡ ಪತ್ರಿಕೆ ಆರಂಭಿಸಿ ಕನ್ನಡಿಗರಿಗೆ ಹುರುಪು ಮೂಡಿಸಿದ್ದ ಲೋಕ ದರ್ಶನ ಸಂಸ್ಥಾಪಕ ಸಂಪಾದಕ ಎಂ.ಬಿ.ದೇಸಾಯಿ ನಿಧನರಾಗಿದ್ದಾರೆ. ಅವರಿಗೆ 97 ವರ್ಷ ವಯಸ್ಸಾಗಿತ್ತು.
ವಯೋಸಹಜ ಕಾಯಿಲೆಯಿಂದಾಗಿ ನಿಲಜಿಯ ಗೋಕುಲ ನಗರದಲ್ಲಿರುವ ಸ್ವಗೃಹದಲ್ಲಿ ಅವರು ಇಂದು ಬೆಳಗ್ಗೆ 10.30ಕ್ಕೆ ನಿಧನರಾದರು.
ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು.
ಮಹಾತ್ಮ ಗಾಂಧೀಜಿಯವರ ಸ್ವಾತಂತ್ರ್ಯ ಚಳುವಳಿಯಲ್ಲಿ ದೇಸಾಯಿಯವರು ಭಾಗವಹಿಸಿದ್ದರು.
1956 ರ ಕಾಲದಲ್ಲಿ ಪತ್ರಿಕೋದ್ಯಮ ಉದ್ಯಮ ಆಗಿರಲಿಲ್ಲ. ಅಂಥ ಸಂದರ್ಭದಲ್ಲಿ ಇವರು ವಾರಪತ್ರಿಕೆ ಆರಂಭಿಸಿ ನಂತರ 1963 ರಲ್ಲಿ ಲೋಕದರ್ಶನ ದಿನಪತ್ರಿಕೆ ಆರಂಭಿಸಿದರು. 1986 ರಲ್ಲಿ ಜನೇವರಿಯಿಂದ ಜೂನವರೆಗೆ ದುಷ್ಕರ್ಮಿಗಳು 6 ಸಲ ಪತ್ರಿಕಾ ಕಾರ್ಯಾಲಯಕ್ಕೆ ಬೆಂಕಿ ಇಟ್ಟರು. ಅದರಿಂದ ತಗ್ಗದೆ, ಬಗ್ಗದೆ ನಿರಂತರ ಪತ್ರಿಕೆ ನಡೆಸಿ ಅಭಿವೃದ್ಧಿ ಪಡಿಸಿದರು. ಅದರಿಂದ ಅವರನ್ನು ಹುಡುಕಿಕೊಂಡು ಅನೇಕ ಪ್ರಶಸ್ತಿಗಳು ಬಂದಿದ್ದವು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಕೂಡ ಲಭಿಸಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ