Latest

ಸ್ನೇಹಿತನನ್ನೇ ಹತ್ಯೆಗೈದು ಮೃತದೇಹದೊಂದಿಗೆ ಠಾಣೆಗೆ ಬಂದು ಶರಣಾದ ವ್ಯಕ್ತಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವ್ಯಕ್ತಿಯೊಬ್ಬ ತನ್ನ ಸ್ನೇಹಿತನನ್ನೇ ಕೊಂದು ಮೃತದೇಹದೊಂದಿಗೆ ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಘಟನೆ ಬೆಂಗಳೂರಿನ ರಾಮಮುರ್ತಿ ನಗರದಲ್ಲಿ ನಡೆದಿದೆ.

ಮಹೇಶಪ್ಪ ಕೊಲೆಯಾದ ದುರ್ದೈವಿ. ರಾಜಶೇಖರ್ ಎಂಬಾತ ಹಣದ ವ್ಯವಹಾರದಲ್ಲಿ ವೈಮನ್ಯಸ್ಯದಿಂದಾಗಿ ತನ್ನ ಸ್ನೇಹಿತ ಮಹೇಶಪ್ಪನನ್ನೇ ಹತ್ಯೆಗೈದಿದ್ದು, ಬಳಿಕ ಮೃತದೇಹವನ್ನು ಕಾರಿನಲ್ಲಿಟ್ಟು, ಕಾರಿನ ಸಮೇತ ರಾಮಮೂರ್ತಿ ನಗರ ಠಾಣೆಗೆ ಬಂದಿದ್ದಾನೆ.

ಆರೋಪಿ ಕೃತ್ಯ ಘಟನೆ ವಿವರ ತಿಳಿದು ಪೊಲೀಸರೇ ಅರೇಕ್ಷಣ ದಂಗಾಗಿದ್ದಾರೆ. ನಂಜನಗೂಡು ಮೂಲದ ಮಹೇಶಪ್ಪ ರಾಮಮೂರ್ತಿ ನಗರದ ಜಯಂತಿ ನಗರದಲ್ಲಿ ವಾಸವಾಗಿದ್ದ. ಈ ವೇಳೆ ರಾಜಶೇಖರ ಎಂಬಾತನ ಪರಿಚಯವಾಗಿ ಇಬ್ಬರೂ ಆತ್ಮೀಯರಾಗಿದ್ದರು. ಬ್ಯಾಂಕ್ ನಿಂದ ಸಾಲ ಕೊಡಿಸುವುದಾಗಿ ಹೇಳಿ ಮಹೇಶಪ್ಪ ಹಲವರಿಂದ ಹಣ ಪಡೆದು ವಂಚಿಸಿದ್ದ. ಈ ವ್ಯವಹಾರದ ಜೊತೆಗೆ ರಾಜಶೇಖರ ಹಾಗೂ ಆತನ ತಾಯಿ ಜೊತೆಗಿದ್ದರು. ಹಣ ಕೊಟ್ಟವರು ರಾಜಶೇಖರ್ ನನ್ನು ಪ್ರಶ್ನೆ ಮಾಡುತ್ತಿದ್ದರು. ಕೊನೆಗೆ ಮನೆಯನ್ನೇ ಮಾರಿ ಹಲವರಿಗೆ ರಾಜಶೇಖರ ದುಡ್ಡುಕೊಟ್ಟಿದ್ದ. ಅಷ್ಟರಲ್ಲಿ ಮಹೇಶಪ್ಪ ನಾಪತ್ತೆಯಾಗಿದ್ದ. ಮಹೇಶಪ್ಪನನ್ನು ಹುಡುಕಿಕೊಂಡು ನಂಜನಗೂಡಿನ ಹಳ್ಳಿಗೆ ಹೋಗಿ ಆತನನ್ನು ನಿನ್ನೆ ರಾತ್ರಿ ಕರೆತಂದಿದ್ದ ರಾಜಶೇಖರ, ಬೆಂಗಳೂರಿನ ಆವಲಹಳ್ಳಿ ಬಳಿ ಹಣ ವಾಪಸ್ ಕೊಡುವಂತೆ ಕೇಳಿದ್ದ.

ಆದರೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಇದರಿಂದ ಕೋಪದಲ್ಲಿ ರಾಜಶೇಖರ ಮಹೇಶಪ್ಪನ ಮೇಲೆ ರಾಡ್ ನಿಂದ ಹಿಗ್ಗಾ ಮುಗ್ಗಾ ಥಳಿಸಿದ್ದಾನೆ. ಹಲ್ಲೆ ಬಳಿಕ ಮಹೇಶಪ್ಪನನ್ನು ಕಾರಿನಲ್ಲಿಯೇ ಬೆಳಿಗ್ಗೆವರೆಗೂ ಇರಿಸಿಕೊಂಡಿದ್ದ. ಬೆಳಿಗ್ಗೆ ಎಷ್ಟು ಹೊತ್ತಾದರೂ ಮಹೇಶಪ್ಪ ಏಳದಿರುವುದನ್ನು ನೋಡಿದಾಗ ಆತ ಮೃತಪಟ್ಟಿರುವುದು ಗೊತ್ತಾಗಿದೆ. ಹಲ್ಲೆ ನಡೆಸಿದ ರಾಡ್, ಡೆಡ್ ಬಾಡಿ, ಕಾರು ಸಮೇತವಾಗಿ ಪೊಲಿಸ್ ಠಾಣೆಗೆ ಬಂದು ಆರೋಪಿ ರಾಜಶೇಖರ ಶರಣಾಗಿದ್ದಾನೆ.

Home add -Advt

 

88 ವರ್ಷಗಳ ಬಳಿಕ ಭರ್ತಿಯಾದ ವಾಣಿವಿಲಾಸ ಸಾಗರ: ಸಂಪದ್ಭರಿತ ಕರ್ನಾಟಕ ನಿರ್ಮಾಣಕ್ಕೆ ಸಂಕಲ್ಪ ಎಂದ ಸಿಎಂ

https://pragati.taskdun.com/basavaraj-bommaivanivilasa-sagarabagina/

 

Related Articles

Back to top button