Belagavi NewsBelgaum NewsKannada NewsKarnataka NewsLatest

*ಬೆಳಗಾವಿ: ಕಬ್ಬು ಕಾರ್ಖಾನೆಗಳಿಗೆ ಮಹತ್ವದ ಸೂಚನೆ ನೀಡಿದ ಜಿಲ್ಲಾಧಿಕಾರಿ*


ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ೨೦೨೩-೨೪ ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಸಂಬಂಧಿಸಿದಂತೆ ಸರ್ಕಾರದ ನಿರ್ದೇಶನದಂತೆ ನಿಗದಿಪಡಿಸಿರುವ ನ್ಯಾಯ ಮತ್ತು ಲಾಭದಾಯಕ ದರಗಳನ್ನು ಸದರಿ ಸಾಲಿನಲ್ಲಿ ಮೆಟ್ರಿಕ್ ಟನ್ ಕಬ್ಬಿಗೆ ಕಾರ್ಖಾನೆಗಳು ಪಾವತಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದ್ದಾರೆ.


ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮು ಕುರಿತು ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ಅಕ್ಟೋಬರ್ ೦೭ ರಂದು ನಡೆದ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳ ಸಭೆಯಲ್ಲಿ ಎಫ್.ಆರ್.ಪಿ ದರದಂತೆ ಬಿಲ್ ಪಾವತಿಸಲು ನಿರ್ಧರಿಸಲಾಗಿತ್ತು.


ಸದರಿ ಸಾಲಿನಲ್ಲಿ ಮೆಟ್ರಿಕ್ ಟನ್ ಕಬ್ಬಿಗೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹರಿಹಂತ ಶುಗರ‍್ಸ್ ಇಂಡಸ್ಟ್ರೀಸ್ ಲಿ. ಜೈನಾಪುರ ಸಕ್ಕರೆ ಕಾರ್ಖಾನೆ ಎಫ್.ಆರ್.ಪಿ ಮೊತ್ತ ರೂ.೩೬೦೧ ರಲ್ಲಿ ಪ್ರತಿ ಟನ್ ಗೆ ಎಚ್&ಟಿ ೭೭೫ ಕಡಿತಗೊಳಿಸಿ ನೇರವಾಗಿ ರೈತರಿಗೆ ರೂ.೩೦೦೦ ಮೊತ್ತ ಪಾವತಿಸಬೇಕು.


ಅಥಣಿ ತಾಲೂಕಿನ ಅಥಣಿ ಶುಗರ‍್ಸ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆ ೩೫೧೮ ರಲ್ಲಿ ೮೫೦ ಕಡಿತಗೊಳಿಸಿ ೩೦೦೦, ಅದರಂತೆ ಬೆಳಗಾವಿ ತಾಲೂಕಿನ ಬೆಳಗಾವಿ ಶುಗರ‍್ಸ್ ಪ್ರೈವೇಟ್ ಲಿಮಿಟೆಡ್ ಹುದಲಿ ಕಾರ್ಖಾನೆ ರೂ. ೩೬೫೭ ರಲ್ಲಿ ರೂ. ೮೫೦ ಕಡಿತಗೊಳಿಸಿ ನೇರವಾಗಿ ರೈತರಿಗೆ ಪಾವತಿಸವ ಮೊತ್ತ ರೂ ೨೯೦೦.


ಅದೇ ರೀತಿಯಲ್ಲಿ ಚಿದಾನಂದ ಬಸವ ಪ್ರಭು ಕೋರೆ ಸಹಕಾರ ಸಕ್ಕರೆ ಕಾರ್ಖಾನೆ ನಿ.(ದೂದ್ ಗಂಗಾ ಕೃಷ್ಣ ಸಹಕಾರ ಸಕ್ಕರೆ ಕಾರ್ಖಾನೆ ನಿ.) ಚಿಕ್ಕೋಡಿ ಕಾರ್ಖಾನೆಯ ಎಫ್.ಆರ್.ಪಿ ಮೊತ್ತ ರೂ ೩೫೮೬ ಪ್ರತಿ ಟನ್ ಗೆ ಎಚ್&ಟಿ ೭೫೦ ಕಡಿತಗೊಳಿಸಿ ನೇರವಾಗಿ ರೈತರಿಗೆ ಪಾವತಿಸವ ಮೊತ್ತ ರೂ ೨೮೩೬, ರಾಮದುರ್ಗ ತಾಲೂಕಿನ ಇ.ಐ.ಡಿ ಫ್ಯಾರಿ ಇಂಡಿಯಾ ಲಿ. (ಧನಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆ) ಎಫ್.ಆರ್.ಪಿ ಮೊತ್ತ ರೂ ೩೬೫೭ರಲ್ಲಿ ಟನ್ ಗೆ ಎಚ್&ಟಿ ೮೯೩ ಕಡಿತಗೊಳಿಸಿ ನೇರವಾಗಿ ರೈತರಿಗೆ ಪಾವತಿಸವ ಮೊತ್ತ ರೂ ೨೮೧೦ ಆಗಿರುತ್ತದೆ.
ಗೋಕಾಕ್ ತಾಲೂಕಿನ ಘಟಪ್ರಭಾ ಎಸ್.ಎಸ್.ಕೆ ಸಹಕಾರಿ ಸಕ್ಕರೆ.ನಿ ಮೊತ್ತ ರೂ ೩೩೪೬ ರಲ್ಲಿ, ಪ್ರತಿ ಟನ್ ಗೆ ೬೫೦ ಕಡಿತಗೊಳಿಸಿ ರೂ ೨೯೫೦.


ಗೋಕಾಕ್ ತಾಲೂಕಿನ ಗೋಕಾಕ್ ಶುಗರ‍್ಸ್ ಕೊಳವಿ ಕಾರ್ಖಾನೆ ಮೊತ್ತ ರೂ ೩೬೪೧, ರಲ್ಲಿ ರೂ. ೮೦೦-೮೨೦ ಕಡಿತಗೊಳಿಸಿ ರೂ ೩೦೦೦, ಚಿಕ್ಕೋಡಿ ತಾಲೂಕಿನ ಹಾಲಸಿದ್ದನಾಥ ಸಹಕಾರಿ ಸಕ್ಕರೆ ಕಾರ್ಖಾನೆ ನಿ. (ನಿಪ್ಪಾಣಿ ಕಾರ್ಖಾನೆ) ರೂ ೩೬೧೧ ರಲ್ಲಿ ಪ್ರತಿ ಟನ್ ಗೆ ಎಚ್&ಟಿ ೮೦೦ ಕಡಿತಗೊಳಿಸಿ ನೇರವಾಗಿ ರೈತರಿಗೆ ಪಾವತಿಸವ ಮೊತ್ತ ರೂ ೨೯೫೦.


ಸವದತ್ತಿ ತಾಲೂಕಿನ ಹರ್ಷ ಶುಗರ‍್ಸ ಲಿಮಿಟೆಡ್ ಸವದತ್ತಿ ಕಾರ್ಖಾನೆ ಮೊತ್ತ ರೂ ೩೩೮೪ ರಲ್ಲಿ ರೂ. ೭೬೦ ಕಡಿತಗೊಳಿಸಿ ರೂ ೨೯೦೦ ಹಾಗೂ ಹುಕ್ಕೇರಿ ತಾಲೂಕಿನ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ನಿ. ಶಂಕೇಶ್ವರ ಕಾರ್ಖಾನೆ ಮೊತ್ತ ರೂ ೩೪೮೮ ರಲ್ಲಿ ರೂ. ೮೦೫ ಕಡಿತಗೊಳಿಸಿ ನೇರವಾಗಿ ರೈತರಿಗೆ ಪಾವತಿಸವ ಮೊತ್ತ ರೂ ೨೬೮೩, ಅದೇ ರೀತಿಯಲ್ಲಿ ಅಥಣಿ ತಾಲೂಕಿನ ಕೃಷ್ಣ ಸಾಗರ ಸಕ್ಕರೆ ಕಾರ್ಖಾನೆ ನಿ. ಸಂಕೋನಟ್ಟಿ ಮೊತ್ತ ರೂ ೩೫೨೮ ರಲ್ಲಿ ರೂ. ೭೯೫ ಕಡಿತಗೊಳಿಸಿ ರೂ ೨೯೦೦, ಖಾನಾಪುರ ತಾಲೂಕಿನ ಲೈಲಾ ಶುಗರ‍್ಸ್ ಲಿಮಿಟೆಡ್ ಭಾಗ್ಯಲಕ್ಷ್ಮಿ ಸಹಕಾರ ಸಕ್ಕರೆ ಕಾರ್ಖಾನೆ ಮೊತ್ತ ರೂ ೩೩೯೬ ರಲ್ಲಿ ರೂ.೭೫೦ ಕಡಿತಗೊಳಿಸಿ ನೇರವಾಗಿ ರೈತರಿಗೆ ಪಾವತಿಸವ ವೆತ್ತ ರೂ ೨೮೦೦ ಪಾವತಿಸಬೇಕು.


ಬೈಲಹೊಂಗಲ್ ತಾಲೂಕಿನ ಮಲಪ್ರಭಾ ಸಹಕಾರ ಸಕ್ಕರೆ ನಿ. ಎಂಕೆ ಹುಬ್ಬಳ್ಳಿ ಕಾರ್ಖಾನೆ ಮೊತ್ತ ರೂ ೩೧೬೫ ರಲ್ಲಿ ಪ್ರತಿ ಟನ್ ರೂ. ೭೦೦ ಕಡಿತಗೊಳಿಸಿ ರೂ ೨೫೦೦.


ರಾಯಬಾಗ ತಾಲೂಕಿನ ರೇಣುಕಾ ಶುಗರ‍್ಸ್ ಲಿ. ರಾಯಬಾಗ ಸಹಕಾರಿ ಸಕ್ಕರೆ ಕಾರ್ಖಾನೆ ಮೇಕಳಿ ಮೊತ್ತ ರೂ ೩೪೪೮ ರಲ್ಲಿ ಪ್ರತಿ ಟನ್ ಗೆ ಎಚ್&ಟಿ ರೂ.೮೧೫-೮೨೦ ಕಡಿತಗೊಳಿಸಿ ನೇರವಾಗಿ ರೈತರಿಗೆ ಪಾವತಿಸವ ಮೊತ್ತ ರೂ ೩೦೦೦.


ಅಥಣಿ ತಾಲೂಕಿನ ರೇಣುಕಾ ಶುಗರ‍್ಸ್ ಬುರ್ಲಟ್ಟಿ ಕಾರ್ಖಾನೆ ಮೊತ್ತ ರೂ ೩೫೩೪ ರಲ್ಲಿ ಪ್ರತಿ ಟನ್ ಗೆ ೮೨೦ ಕಡಿತಗೊಳಿಸಿ ಮೊತ್ತ ರೂ ೩೦೦೦ ಹಾಗೂ ಸವದತ್ತಿ ತಾಲೂಕಿನ ರೇಣುಕಾ ಶುಗರ‍್ಸ್ ಮುನೋವಳ್ಳಿ ಕಾರ್ಖಾನೆ ಮೊತ್ತ ರೂ ೩೭೭೩ ರಲ್ಲಿ ರೂ.೮೩೦-೮೪೦ ಕಡಿತಗೊಳಿಸಿ ನೇರವಾಗಿ ರೈತರಿಗೆ ಪಾವತಿಸವ ಮೊತ್ತ ರೂ ೩೦೦೦ ಪಾವತಿಸಬೇಕು.


ಗೋಕಾಕ್ ತಾಲೂಕಿನ ಸತೀಶ್ ಶುಗರ‍್ಸ್ ಲಿ. ಹುಣಶ್ಯಾಳ ಕಾರ್ಖಾನೆ ಮೊತ್ತ ರೂ ೩೬೩೫ ರಲ್ಲಿ ಪ್ರತಿ ಟನ್ ಗೆ ಎಚ್&ಟಿ ೭೫೦ ಕಡಿತಗೊಳಿಸಿ ನೇರವಾಗಿ ರೈತರಿಗೆ ಪಾವತಿಸವ ಮೊತ್ತ ರೂ ೨೯೦೦, ಹುಕ್ಕೇರಿ ತಾಲೂಕಿನ ಶ್ರೀ ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆ ನಿ. ಹಿಡಕಲ್ ಡ್ಯಾಂ ಮೊತ್ತ ರೂ ೩೫೮೯ ರಲ್ಲಿ ಪ್ರತಿ ಟನ್ ೭೯೯ ಕಡಿತಗೊಳಿಸಿ ನೇರವಾಗಿ ರೈತರಿಗೆ ಪಾವತಿಸವ ಮೊತ್ತ ರೂ ೨೭೯೦ ಹಾಗೂ ಅಥಣಿ ತಾಲೂಕಿನ ಶಿರಗುಪ್ಪಿ ಶುಗರ‍್ಸ್ ವರ್ಕ್ಸ ಲಿ.ಕಾಗವಾಡ ಕಾರ್ಖಾನೆ ರೂ. ಮೊತ್ತ ರೂ ೩೪೯೧ ರಲ್ಲಿ ಪ್ರತಿ ಟನ್ ಗೆ ಎಚ್&ಟಿ ೭೭೫ ಕಡಿತಗೊಳಿಸಿ ನೇರವಾಗಿ ರೈತರಿಗೆ ಪಾವತಿಸವ ಮೊತ್ತ ರೂ ೨೯೫೦ ಪಾವತಿಸಬೇಕು.


ರಾಯಬಾಗ ತಾಲೂಕಿನ ಶಿವಶಕ್ತಿ ಶುಗರ‍್ಸ್ ಲಿ. ಸವದತ್ತಿ ಕಾರ್ಖಾನೆ ಮೊತ್ತ ರೂ ೩೬೨೩ ರಲ್ಲಿ ೭೫೦ ಕಡಿತಗೊಳಿಸಿ ನೇರವಾಗಿ ರೈತರಿಗೆ ಪಾವತಿಸವ ಮೊತ್ತ ರೂ ೨೮೭೩, ರಾಮದುರ್ಗ ತಾಲೂಕಿನ ಶಿವಸಾಗರ ಶುಗರ‍್ಸ್ ಅಂಡ್ ಆಗ್ರೋ ಪ್ರಾಡಕ್ಟ್ -ಕಾರ್ಯನಿರ್ವಹಣೆ ಹರಿಹಂತ ಶುಗರ‍್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಉದಪುಡಿ ಕಾರ್ಖಾನೆ ಮೊತ್ತ ರೂ ೩೪೮೫ ರಲ್ಲಿ ಪ್ರತಿ ಟನ್ ಗೆ ೭೫೪ ಕಡಿತಗೊಳಿಸಿ ನೇರವಾಗಿ ರೈತರಿಗೆ ಪಾವತಿಸವ ಮೊತ್ತ ರೂ ೨೭೩೧.


ಬೈಲಹೊಂಗಲ ತಾಲೂಕಿನ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ನಿ. ಸಿದ್ಧಸಮುದ್ರ ಕಾರ್ಖಾನೆ ಮೊತ್ತ ರೂ ೩೬೫೭ ರಲ್ಲಿ ಪ್ರತಿ ಟನ್ ಗೆ ಎಚ್&ಟಿ ೮೫೭ ಕಡಿತಗೊಳಿಸಿ ನೇರವಾಗಿ ರೈತರಿಗೆ ಪಾವತಿಸವ ಮೊತ್ತ ರೂ ೨೮೦೦, ಗೋಕಾಕ ತಾಲೂಕಿನ ಸೌಭಾಗ್ಯ ಲಕ್ಷ್ಮೀ ಶುಗರ‍್ಸ್ ಹಿರೇನಂದಿ ಕಾರ್ಖಾನೆ ಮೊತ್ತ ರೂ ೩೦೮೯ ರಲ್ಲಿ ಪ್ರತಿ ಟನ್ ಗೆ ಎಚ್&ಟಿ ೭೯೦ ರೂ ೨೯೫೦


ಅದರಂತೆ ಬೆಳಗಾವಿ ತಾಲೂಕಿನ ದಿ ಮಾರ್ಕಂಡೇ ಸಹಕಾರಿ ಸಕ್ಕರೆ ಕಾರ್ಖಾನೆ ನಿ. ಕಾಕತಿ ಕಾರ್ಖಾನೆ ರೂ. ಮೊತ್ತ ರೂ ೩೪೭೫ ರಲ್ಲಿ ೮೨೦ ಕಡಿತಗೊಳಿಸಿ ಪಾವತಿಸವ ಮೊತ್ತ ರೂ ೨೬೫೫, ಅಥಣಿ ತಾಲೂಕಿನ ದಿ ಉಗರ್ ಶುಗರ‍್ಸ್ ವರ್ಕ್ಸ ಲಿ. ಉಗಾರ್ ಕೂರ್ದ ಕಾರ್ಖಾನೆ ಮೊತ್ತ ರೂ ೩೬೫೪ ರಲ್ಲಿ ಪ್ರತಿ ಟನ್ ಗೆ ೬೫೪ ಕಡಿತಗೊಳಿಸಿ ನೇರವಾಗಿ ರೈತರಿಗೆ ಪಾವತಿಸವ ಮೊತ್ತ ರೂ ೩೦೦೦ ಪಾವತಿಸಲು ತಿಳಿಸಲಾಗಿದೆ.
ಚಿಕ್ಕೋಡಿ ತಾಲೂಕಿನ ವೆಂಕಟೇಶ್ವರ ಪವರ್ ಪ್ರಾಜೆಕ್ಟ್ ಲಿಮಿಟೆಡ್ ಬೆಡ್ಕಿಹಾಳ ಕಾರ್ಖಾನೆ ಮೊತ್ತ ರೂ ೩೬೯೩ ರಲ್ಲಿ ೭೭೫ ಕಡಿತಗೊಳಿಸಿ ಪಾವತಿಸವ ಮೊತ್ತ ರೂ ೩೦೦೦ ಹಾಗೂ ಹುಕ್ಕೇರಿ ತಾಲೂಕಿನ ವಿಶ್ವರಾಜ್ ಶುಗರ‍್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಬೆಲ್ಲದ ಬಾಗೇವಾಡಿ ಕಾರ್ಖಾನೆ ಮೊತ್ತ ರೂ ೩೬೩೨ ರಲ್ಲಿ ರೂ. ೭೬೭ ಕಡಿತಗೊಳಿಸಿ ನೇರವಾಗಿ ರೈತರಿಗೆ ಪಾವತಿಸವ ಮೊತ್ತ ೨೮೬೫ ರೂಪಾಯಿಗಳಂತೆ ಬಿಲ್ ಪಾವತಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button