*ಕಲಕಾಂಬ ಹಾಗೂ ಮುಚ್ಚಂಡಿ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿದ ಜಿ.ಪಂ. ಸಿಇಒ ರಾಹುಲ್ ಶಿಂಧೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿ.ಪಂ. ಸಿಇಒ ರಾಹುಲ್ ಶಿಂಧೆ ತಾಲ್ಲೂಕಿನ ಕಲಕಾಂಬ ಹಾಗೂ ಮುಚ್ಚಂಡಿ ಗ್ರಾಮ ಪಂಚಾಯತಿಗಳಲ್ಲಿ ಸನ್ 2024-25ನೇ ಸಾಲಿನಡಿ ಮನರೇಗಾ ಯೋಜನೆಯಡಿ ಬೂದು ನೀರು ನಿರ್ವಹಣೆ ಕಾಮಗಾರಿಗೆ ಭೇಟಿ ನೀಡಿ ಪರಿಶೀಲಿಸಿ, ನಿಗಧಿತ ಸಮಯದಲ್ಲಿ ಕಾಮಗಾರಿಯನ್ನು ಮುಕ್ತಾಯಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕಿನ ಕಲಕಾಂಬ ಗ್ರಾಮ ಪಂಚಾಯತಿಗೆ ಮಂಗಳವಾರ (ಫೆ.25) ರಂದು ಭೇಟಿ ನೀಡಿದ ಅವರು. ಸ್ವತ: ಅವರೇ ಇ ಸ್ವತ್ತು ಖಾತಾ ಜಾಲತಾನ ತೆರೆದು ಇ ಸ್ವತ್ತು ಲಾಗಿನ್ ಮಾಡಬೇಕಾದರೆ ತೊಗೆದುಕೊಳ್ಳವ ಸಮಯ, ಒಂದು ದಾಖಲೆ ನೀಡಬೇಕಾದರೆ ಎಷ್ಟು ಸಮಯ ಬೇಕಾಗುತ್ತದೆ ಮತ್ತು ಅದಕ್ಕೆ ಬೇಕಾಗುವ ದಾಖಲೆಗಳೇನು ಎಂಬುದನ್ನು ಪರಿಶೀಲನೆ ಮಾಡಿದರು. ಅಲ್ಲದೇ ವಿವಿಧ ಯೋಜನೆಯಡಿ ಅನುಷ್ಠಾನಗೊಂಡ ಕಾಮಗಾರಿ ಕಡತಗಳನ್ನು ಪರಿಶೀಲನೆ ನಡೆಸಿ ಪಂಚಾಯತ ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಕಚೇರಿಗೆ ಹಾಜರಿದ್ದು ಅಚ್ಚು-ಕಟ್ಟಾಗಿ ಕಾಯರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಕಲಕಾಂಬ ಗ್ರಾಮದ 2023-24ನೇ ಸಾಲಿನ ಲೆಕ್ಕ ಶಿರ್ಷಿಕೆ-5054 ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿ ಯೋಜನೆಯಡಿ 40 ಲಕ್ಷ ಅನುದಾನದಲ್ಲಿ ಅನುಷ್ಠಾನ ಮಾಡಲಾಗುತ್ತಿರುವ ಸಿ.ಸಿ ರಸ್ತೆ, ಚರಂಡಿ ಹಾಗೂ ಪೇವರ್ಸ್ ರಸ್ತೆ ನಿರ್ಮಾಣ ಕಾಮಗಾರಿ ಪ್ರಗತಿ ಪರಿಶೀಲಿಸಿದರು.
ಮುಂದುವರೆದು ವಿಶ್ವೇಶ್ವರಯ್ಯ ನಗರದಲ್ಲಿ 179 ಲಕ್ಷ ಅನುದಾನದಲ್ಲಿ ತೋಟಗಾರಿಕೆ ಉಪ ನಿರ್ದೇಶಕರು ಮತ್ತು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಹೊಸದಾಗಿ ನಿರ್ಮಿಸಲಾಗುತ್ತಿರುವ ಕಟ್ಟಡ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಪಂ.ರಾ.ಇಂ. ಬೆಳಗಾವಿ ವಿಭಾಗದ ಇಇ ಸುಂದರ ಬಿ.ಕೊಳಿ, ಎಇಇ ಬಿ.ಎಮ್ ಬನ್ನೂರ ಪಿಡಿಒ ಗೋಪಾಲ ಗೂಡಸಿ, ತಾಂತ್ರಿಕ ಸಹಾಯಕರು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ