ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಶ್ರೀನಗರದ ವಸತಿ ರಹಿತರಿಗೆ ಹೊಸ ಮನೆ ಹಂಚಿಕೆ ಸಂಬಂಧ ಇಂದು ಉತ್ತರ ಶಾಸಕ ಅನಿಲ ಬೆನಕೆ ಮಹಾನಗರ ಪಾಲಿಕೆಯ ಶಾಸಕರ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದರು.
ಪಾಲಿಕೆ ವ್ಯಾಪ್ತಿಯ ಜಾಗಗಳನ್ನು ಗುರುತಿಸಿ ವಸತಿ ರಹಿತರಿಗೆ ಜಿ+೩ ವಸತಿ ಸಮುಚ್ಛಯಗಳ ನಿರ್ಮಾಣ ಕಾರ್ಯ ಶೀಘ್ರದಲ್ಲೇ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು. ೧೬೦೩ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡುವ ಕುರಿತು ನಗರ ವ್ಯಾಪ್ತಿಯಲ್ಲಿ ಡಿಪಿಆರ್(ಕ್ರಿಯಾ ಯೋಜನೆ) ತಯಾರಾಗಿದ್ದು ತಾಂತ್ರಿಕ ಅನುಮೋದನೆ ಬೆಂಗಳೂರಿಂದ ಶೀಘ್ರವಾಗಿ ಪಡೆಯಲು ಅಧಿಕಾರಿಗಳಿಗೆ ಸೂಚಿಸಿದರು.
ಸಾರ್ವಜನಿಕರಿಂದ ಬಹಳಷ್ಟು ಅರ್ಜಿಗಳು ಸ್ವೀಕಾರವಾಗಿದ್ದು, ಅಧಿಕಾರಿಗಳು ಈ ಕೆಲಸ ನಿರ್ವಹಿಸಲು ಅನಗತ್ಯ ವಿಳಂy ಧೋರಣೆ ಮಾಡಿದರೆ ತಕ್ಕ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಅನಿಲ ಬೆನಕೆ ಎಚ್ಚರಿಸಿದ್ದಾರೆ.
ಈಗಾಗಲೇ ಶ್ರೀನಗರದಲ್ಲಿ ವಿತರಿಸಲಾದ ಮನೆಗಳಲ್ಲಿ ಅನರ್ಹ ಫಲಾನುಭವಿಗಳು ತುಂಬಿಕೊಂಡಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಶಾಸಕ ಅನೀಲ ಬೆನಕೆ ಸೂಚಿಸಿದರು.
ಮಹಾನಗರ ಪಾಲಿಕೆಯ ಎಇಇ ವಿ. ಎಸ್. ಹಿರೇಮಠ, ಮಹೇಶ ನರಸನ್ನವರ, ಆರ್. ಎಚ್. ಕುಲಕರ್ಣಿ, ಪಿ. ಎನ್. ಪಾಟೀಲ, ಆಪ್ತ ಸಹಾಯಕ ವ್ಹಿ ಎಂ ಪತ್ತಾರ ಹಾಗೂ ಇತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ