
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಆಗಾಗಾಗ ಲವ್ ಜಿಹಾದ್ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದೆ. ವಿವಾಹಿತ ಮುಸ್ಲಿಂ ವ್ಯಕ್ತಿಯೊಬ್ಬ ಸಹೋದರಿ ಎನ್ನುತ್ತಲೇ ಹಿಂದೂ ಯುವತಿಯನ್ನು ಬಲೆಗೆ ಕೆಡವಿ ಅಪಹರಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಗದಗ ಬೆಟಗೇರಿ ಅವಳಿನಗರದ ಮಂಜುನಾಥ್ ನಗರದ 19 ವರ್ಷದ ಯುವತಿ ನಾಪತ್ತೆಯಾಗಿದ್ದು, ಆಕೆಯ ಪೋಷಕರು ಇದು ಲವ್ ಜಿಹಾದ್ ಪ್ರಕರಣ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿವಾಹಿತನಾಗಿರುವ 30 ವರ್ಷದ ಅಮೀರ್ ಕುಕನೂರ 19 ವರ್ಷದ ಯುವತಿಯನ್ನು ತಂಗಿ ತಂಗಿ ಎಂದು ಕರೆಯುತ್ತಲೇ ನಾಟಕವಾಡಿ ಆಕೆಯನ್ನು ಪ್ರೀತಿ-ಪ್ರೇಮ ಎಂದು ಬಲೆಗೆ ಕೆಡವಿ ಈಗ ಯುವತಿಯೊಂದಿಗೆ ನಾಪತ್ತೆಯಾಗಿದ್ದಾನೆ. ಅಷ್ಟೇ ಅಲ್ಲ. ಅಮೀರ್ ಜೊತೆ ಇನ್ನೂ ಇಬ್ಬರು ಹಿಂದೂ ಯುವತಿಯರು ಸಂಪರ್ಕದಲ್ಲಿದ್ದಾರೆ. ಜನವರಿ 16ರಿಂದ ತಮ್ಮ ಮಗಳು ಕಿಡ್ನ್ಯಾಪ್ ಆಗಿದ್ದಾಳೆ ಎಂದು ಪೊಲೀಸರಿಗೆ ದೂರಿದ್ದಾರೆ.
ಆದರೆ ಬೆಟಗೇರಿ ಪೊಲೀಸರು ಲವ್ ಜಿಹಾದ್ ಪ್ರಕರಣ ದಾಖಲಿಸದೇ ಯುವತಿ ನಾಪತ್ತೆ ಪ್ರಕರನ ದಾಖಲಿಸಿಕೊಂಡು ನಿರ್ಲಕ್ಷ ವಹಿಸಿದ್ದಾರೆ. ಯುವತಿ ಹುಡುಕಾಡುವ ಪ್ರಯತ್ನವನ್ನೂ ಮಾಡುತ್ತಿಲ್ಲ ಎಂದು ಪೋಷಕರು ಕಣ್ಣೀರಿಟ್ಟಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ