Latest

*ಮನಗೆ ನುಗ್ಗಿ ಟಿವಿ, ಫ್ರಿಡ್ಜ್ ಪೀಸ್ ಪೀಸ್ ಮಾಡಿದ ದುಷ್ಕರ್ಮಿಗಳು*

ಪ್ರಗತಿವಾಹಿನಿ ಸುದ್ದಿ: ಗದಗ ನಗರದ ಪಂಚಾಕ್ಷರಿ ನಗರದಲ್ಲಿ ಹಾಡಹಗಲೇ ಸಿನಿಮಿಯ ರೀತಿಯಲ್ಲಿ ಮನೆಗೆ ನುಗ್ಗಿ‌ದ ಐವರು ದುಷ್ಕರ್ಮಿಗಳು ಮನೆಯಲ್ಲಿದ್ದ ಟಿವಿ, ಫ್ರಿಡ್ಜ್ ಪೀಸ್ ಪೀಸ್ ಮಾಡಿರುವ ಘಟನೆ ನಡೆದಿದೆ. 

ಏಕಾಏಕಿ ಮನೆಗೆ ನುಗ್ಗಿದ ಖದೀಮರು ಗೂಂಡಾಗಿರಿ ಮಾಡಿದ್ದಾರೆ. ಇದೆ ವೇಳೆ ಮನೆಯಲ್ಲಿದ್ದ ಮಹಿಳೆಯರ ಸೀರೆಯನ್ನೂ ಎಳೆದು ಅಸಭ್ಯ ವರ್ತನೆ ತೋರಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಈ ಘಟನೆಯಿಂದ ಸ್ಥಳೀಯರು ಆತಂಕಗೊಂಡಿದ್ದಾರೆ.‌

ಕೃತ್ಯವೆಸಗಿ ಹೋಗುವಾಗ ದುಷ್ಕರ್ಮಿಗಳು, ಮನೆ ಬಳಿ ಇದ್ದ ಜೀಪ್​​ಗೂ ಬೆಂಕಿ ಹಚ್ಚಿದ್ದಾರೆ. ಹುಯಿಲಗೋಳ ಗ್ರಾಮ ಪಂಚಾಯತಿ ಸದಸ್ಯರಾದ ಮಿಲಿಂದ್ ಕಾಳೆ ಹಾಗೂ ನಾಗರಾಜ್ ಕಾಳೆ ಎಂಬುವವರ ಕುಮ್ಮಕ್ಕಿನಿಂದ ದಾಳಿ ನಡೆದಿದೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಗದಗ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Home add -Advt

Related Articles

Back to top button