
ಬೃಹತ್ ಸ್ವಚ್ಛತಾ ಯಂತ್ರ ಪ್ರಾತ್ಯಕ್ಷಿಕೆ; ಬೆಳಗಾವಿಗೂ ಖರೀದಿಸಲು ಅಭಯ್ ಚಿಂತನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ-
ಬೃಹದಾಕಾರದ ಸ್ವಚ್ಛತಾ ಯಂತ್ರದ ಪ್ರಾತ್ಯಕ್ಷಿಕೆ ಬೆಳಗಾವಿಯ ಸರಾಫ್ ಗಲ್ಲಿಯಲ್ಲಿ ಶನಿವಾರ ನಡೆಯಿತು.
ಶಾಸಕ ಅಭಯ ಪಾಟೀಲ ಉಪಸ್ಥಿತಿಯಲ್ಲಿ ಈ ಪ್ರಾತ್ಯಕ್ಷಿಕೆ ನಡೆದಿದ್ದು, ಬೆಳಗಾವಿಗೂ ಇಂತಹ ಎರಡು ಯಂತ್ರ ಖರೀದಿಸುವ ಯೋಚನೆ ಇದೆ ಎಂದು ಶಾಸಕರು ತಿಳಿಸಿದರು.
ಸೂರತ್ ನಗರದಲ್ಲಿ ಇಂತಹ 6 ಯಂತ್ರಗಳನ್ನು ಖರೀದಿಸಿ, ಬಳಸಲಾಗುತ್ತಿದೆ. ಶೀಘ್ರವೇ ಸೂರತ್ ಗೆ ತೆರಳಿ ಅದರ ನಿರ್ವಹಣೆ ಮತ್ತಿತರ ಮಾಹಿತಿ ತಿಳಿದುಕೊಳ್ಳಲಾಗುವುದು. ನಂತರ ಬೆಳಗಾವಿ ದಕ್ಷಿಣ ಕ್ಷೇತ್ರಕ್ಕೊಂದು, ಉತ್ತರ ಕ್ಷೇತ್ರಕ್ಕೊಂದು ಇಂತಹ ಯಂತ್ರವನ್ನು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಖರೀದಿಸಲಾಗುವುದು ಎಂದು ಅಭಯ್ ಪಾಟೀಲ ತಿಳಿಸಿದರು.
ಇದರಲ್ಲೇ ಸ್ವಲ್ಪ ಸಣ್ಣ ಯಂತ್ರವೂ ಇದ್ದು, ಬೆಳಗಾವಿಯ ಸಣ್ಣ ರಸ್ತೆಗಳಿಗಾಗಿ ಅವುಗಳನ್ನೂ ಪೂರ್ಣ ಅಧ್ಯಯನದ ನಂತರ ಖರೀದಿಸಲಾಗುವುದು ಎಂದು ಅವರು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ