Belagavi NewsBelgaum NewsKannada NewsKarnataka NewsLatest
*ಜೂಜಾಟ ಪ್ರಕರಣ: ಪೊಲೀಸರ ದಿಢೀರ್ ದಾಳಿ: ಐವರು ಆರೋಪಿಗಳು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಜೂಜು ಅಡ್ಡೆಯ ಮೇಲೆ ದಿಢೀರ್ ದಾಳಿ ನಡೆಸಿರುವ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬುದ್ಧಿರಾಜ ಶಾಂತಿನಾಥ ಭಾಗಣ್ಣವರ (೩೩), ಕಿರಣ ನಾರಾಯಣ ಖಿಲ್ಲಾರೆ @ ಗವಳಿ (೪೫), ಭರತೇಶ ಮಾಣಿಕ ಸಂಕೇಶ್ವರಿ (೫೨), ವಿನಾಯಕ ಪ್ರಕಾಶ ಗವಳಿ (೩೭), ಸೂರಜ ಪ್ರಕಾಶ ದಳವಿ (೨೮) ಬಂಧಿತ ಆರೋಪಿಗಳು.
ಇವರೆಲ್ಲರೂ ಬೆಳಗಾವಿಯ ಬಸ್ತವಾಡ ಗ್ರಾಮದ ಧಾಮಣೆ ರೋಡ್ ಪಕ್ಕದ ಸ್ಮಶಾನಕ್ಕೆ ಸಾಗಿದ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಅಡ್ಡೆ ಆರಂಭಿಸಿ ಇಸ್ಪೀಟ್ ಎಲೆಗಳ ಮೇಲೆ ಜನರಿಂದ ಹಣ ಕಟ್ಟಿಸಿ ಅಂದರ್ ಬಾಹರ್ ಜೂಜಾಟ ಆಡುತ್ತಿದ್ದರು.
ಖಚಿತ ಮಾಹಿತಿ ಮೇರೆಗೆ ಹಿರೇಬಾಗೇವಾಡಿ ಠಾಣೆಯ ಪಿಎಸ್‌ಐ ಅವಿನಾಶ. ಎ. ವೈ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ರೂ.೩,೬೦೦/- ನಗದು ಹಣ ಹಾಗೂ ೫೨ ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಲಾಗಿದೆ.



