
ಪ್ರಗತಿವಾಹಿನಿ ಸುದ್ದಿ; ಶಿರಸಿ: ದೀಪಾವಳಿ ಹಬ್ಬದಂದೇ ಇಸ್ಪೀಟು ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿರುವ 7 ಜನರನ್ನು ಬಂಧಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ನಡೆದಿದೆ.
ಆರೋಪಿಗಳು ಶಿರಸಿ ನಗರದ ಮಾರಿಕಾಂಬಾ ಕ್ರೀಡಾಂಗಣ ಹಿಂಭಾಗದ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೀಟು ಜೂಜಾಟ ನಡೆಸುತ್ತಿದ್ದರು. ಖಚಿತ ಮಾಹಿತಿ ಆದರಿಸಿ ದಾಳಿ ನಡೆಸಿದ ಪೊಲೀಸರು ರಾಘವೇಂದ್ರ ಸಿದ್ದಪ್ಪ ಕಸ್ತೂರ ಬಾ ನಗರ, ಸತೀಶ ಶಾಂತಾರಾಮ ನಾಯ್ಕ ವಿವೇಕಾನಂದ ನಗರ, ರಾಘವೇಂದ್ರ ಬಾಬು ಪೂಜಾರಿ, ಪರಶುರಾಮ ಉಲ್ಲಾಸ ಭಟ್ ನರೆಬೈಲ್, ರಾಘವೇಂದ್ರ ಅಣ್ಣಪ್ಪ ನಾಯ್ಕ ಚಿಪಗಿ, ಸುನೀಲ್ ಕುಮಾರ ಗಣಪತಿ ಹರಿಗೋಲ ಚಿಪಗಿ, ಪ್ರದೀಪ ಪರಮೇಶ್ವರ ನಾಯ್ಕ ಚಿಪಗಿ ಯನ್ನು ಬಂಧಿಸಿದ್ದಾರೆ.
ಬಂಧಿತರಿಂದ 1255 ರೂ ನಗದು ಹಣ ಹಾಗೂ ಜೂಜಾಟ ಆಡಲು ಬಳಸುತ್ತಿದ್ದ ಸ್ವತ್ತುಗಳನ್ನು ಜಪ್ತಿಪಡಿ ಮಾಡಿದ್ದಾರೆ. ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ
ಕಾರವಾರ ಪೊಲೀಸ್ ಅಧೀಕ್ಷಕ ಶಿವಪ್ರಕಾಶ ದೇವರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದರಿನಾಥ, ಶಿರಸಿಯ ಪೊಲೀಸ್ ಉಪಾಧೀಕ್ಷಕ ಗೋಪಾಲಕೃಷ್ಣ ನಾಯಕ, ವೃತ್ತ ನಿರೀಕ್ಷಕ ಬಿ.ಯು ಪ್ರದೀಪ್ ಮಾರ್ಗದರ್ಶನದಲ್ಲಿ ಹೊಸ ಮಾರುಕಟ್ಟೆ ಠಾಣೆಯ ಪಿ.ಎಸ್.ಐ ನಾಗಪ್ಪ ನೇತೃತ್ವದ ಎಎಸ್ಐ ಸುಭಾಷ ರಾಠೋಡ, ಪಿ.ಜಿ.ಕಟ್ಟಿ,ಡಿ.ಎಚ್ ಹೊಸಕಟ್ಟಾ, ಸಿಬ್ಬಂದಿಗಳಾದ ಸಂತೋಷ ಶೆಟ್ಟಿ,ರೋನಾಲ್ಡ್ ಅಲ್ಮೇಡಾ,ಪ್ರವೀಣ ಕುಡಾಲ್ಕರ್ ,ಗಣಪತಿ ಬಂಟ,,ರಾಮಯ್ಯ ಪೂಜಾರಿ, ಮಹ್ಮದ್ ಸಲಿಂ,ಅಶೋಕ ನಾಯ್ಕರವರನ್ನು ಒಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ.
 
					 
				 
					 
					 
					 
					
 
					 
					 
					


