Latest

ಕೊರೊನಾ ವಾರಿಯರ್ ಗಣಪನಿಗೆ ವಿಶೇಷ ಪೂಜೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಗಣೇಶ ಚತುರ್ಥಿಯ ಅಂಗವಾಗಿ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆಯವರು ವೈದ್ಯನ ರೂಪದಲ್ಲಿರುವ ಗಣೇಶನಿಗೆ ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಕೊವಿಡ್-19 ನ ಹಾವಳಿಯು ಇಡೀ ಮಾನವ ಜನಾಂಗವನ್ನೇ ತಲ್ಲಣಗೊಳಿಸಿದೆ. ಈ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್ ಮಾತ್ರ ನಿಸ್ವಾರ್ಥವಾಗಿ, ತಮ್ಮ ಜೀವದ ಹಂಗನ್ನು ತೊರೆದು ಕೇವಲ ಜನಸೇವೆಯನ್ನೇ ಉಸಿರಾಗಿಸಿಕೊಂಡು, ನಮಗಾಗಿ ದುಡಿಯುತ್ತಾ, ಇಂದು ನಮ್ಮ ಪಾಲಿನ ದೇವತಾಸ್ವರೂಪಿಗಳಾಗಿದ್ದಾರೆ.

Home add -Advt

ಗಣೇಶ ಹಬ್ಬದ ಸುಸಂದರ್ಭವನ್ನು, ಈ ಧೀರರಿಗೆ ಧನ್ಯವಾದಗಳನ್ನು ಅರ್ಪಿಸಲು ಬಳಸಿದ್ದೇವೆ. ವೈದ್ಯನ ರೂಪದಲ್ಲಿರುವ ಗಣೇಶನ ಮೂರ್ತಿಯನ್ನು ಸಚಿವೆ ಹಾಗೂ ಸಂಸದರ ಮನೆಗೆ ತಂದು, ಕೊರೊನಾ ವಾರಿಯರ್ ಗಳ ಚಿತ್ರಗಳೊಂದಿಗೆ ಪ್ರತಿಷ್ಟಾಪಿಸಿ, ವಿಧಿವತ್ತಾಗಿ ಪೂಜಿಸಿ, ಲೋಕದ ಸರ್ವ ವಿಘ್ನಗಳನ್ನೂ ನಿವಾರಿಸೆಂದು ಗಣಪತಿಯಲ್ಲಿ ಪ್ರಾರ್ಥಿಸಿದರು.

Related Articles

Back to top button