ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಕೊರೋನಾ ಸಂಕಷ್ಟದ ಮಧ್ಯೆಯೇ ಶಾಸಕ ಗಣೇಶ ಹುಕ್ಕೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಉದ್ಯೋಗ ಖಾತ್ರಿ ಯೋಜನೆಯ ಅಡಿ ವಿವಿಧ ನಾಲಾ ಬದು, ಬಾಂಧಾರಗಳ ಹೂಳೆತ್ತುವ ಕಾಮಗಾರಿ, ವಯಕ್ತಿಕ ಕಾಮಗಾರಿಗಳಾದ ತೆರೆದ ಬಾವಿ, ಅಲ್ಪ ಆಳದ ಬಾವಿ, ದನದ ಕೊಟ್ಟಿಗೆ ನಿರ್ಮಾಣ ಮುಂತಾದ ಕಾಮಗಾರಿಗಳನ್ನು ವೀಕ್ಷಿಸಿದರು.
ಆರ್ಥಿಕ ಸಂಕಷ್ಟದ ಸಮಯದಲ್ಲಿ ರೈತರು, ಕೂಲಿ ಕಾರ್ಮಿಕರು ಇಂತಹ ಯೊಜನೆಗಳ ಲಾಭ ಪಡೆಯಬೇಕು. ಇದರಿಂದ ನೆಮ್ಮದಿಯಿಂದ ಬದುಕಲು ಸಾಧ್ಯವಾಗಲಿದೆ ಎಂದ ಗಣೇಶ ಹುಕ್ಕೇರಿ, ಅಧಿಕಾರಿಗಳು ದುಡಿಯುವ ಎಲ್ಲ ವರ್ಗಗಳಿಗೆ ಈ ಯೋಜನೆಯ ಲಾಭ ದೊರೆಯುವಂತೆ ವಿಸ್ತರಿಸಬೇಕು ಎಂದು ಸೂಚಿಸಿದರು.
ಕೃಷಿ ಇಲಾಖೆಯ ಜಲಾನಯನ ಕಾಮಗಾರಿಗಳನ್ನು ಸಹ ಗಣೇಶ ಹುಕ್ಕೇರಿ ವೀಕ್ಷಿಸಿದರು. ಸಣ್ಣ ಸಣ್ಣ ಮಣ್ಣು ಹಾಗೂ ನೀರು ಸಂರಕ್ಷಣಾ ರಚನೆಗಳು ಅಂತರ್ಜಲ ಮಟ್ಟ ಹೆಚ್ಚಿಸಿ ರೈತರಿಗೆ ಉತ್ತಮ ಫಸಲು ಪಡೆಯಲು ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ಕ್ಷೇತ್ರದಲ್ಲಿ ಸುಮಾರು 7 ನಾಲಾ ಬದು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು ಇದರಿಂದ ಕೊಳವೆ ಬಾವಿ ಹಾಗೂ ತೆರೆದ ಬಾವಿಗಳ ನೀರಿನ ಮಟ್ಟ ಹೆಚ್ಚಾಗಲಿದೆ ಎಂದೂ ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ