ಗಣೇಶ ವಿಸರ್ಜನೆ: ವಾಹನ ಸಂಚಾರ ಮಾರ್ಗಗಳ ಬದಲಾವಣೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಗುರುವಾರ ಬೆಳಗಾವಿ ನಗರದಲ್ಲಿ ಶ್ರೀ ಗಣೇಶೋತ್ಸವದ ಅಂತಿಮ ದಿನದ ಮೆರವಣಿಗೆಯು ನಗರದ ನರಗುಂದಕರ ಭಾವೆ ಚೌಕದಿಂದ ಪ್ರಾರಂಭವಾಗಿ ಮಾರುತಿ ಗಲ್ಲಿ, ಹುತಾತ್ಮ ಚೌಕ, ರಾಮದೇವ ಗಲ್ಲಿ, ಸಮಾದೇವಿ ಗಲ್ಲಿ, ಯಂಡೇಕೂಟ, ಕಾಲೇಜ ರಸ್ತೆ, ಶ್ರೀ ಧರ್ಮವೀರ ಸಂಭಾಜಿ ಚೌಕ (ಬೋಗಾರವೆಸ್), ರಾಮಲಿಂಗಖಿಂಡ ಗಲ್ಲಿ ರಸ್ತೆ, ಟಿಳಕಚೌಕ, ಹೇಮು ಕಾಲನಿ ಚೌಕ (ಶಿವಭವನ), ಶನಿಮಂದಿರ, ಕಪಿಲೇಶ್ವರ ಓವರ್ ಬ್ರಿಡ್ಜ ಮೂಲಕ ಕಪಿಲೇಶ್ವರ ಮಂದಿರದ ಬಳಿ ಮುಕ್ತಾಯಗೊಳ್ಳಲಿದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸುಗಮ ಸಂಚಾರ ವ್ಯವಸ್ಥೆ ಕುರಿತು ದಿನಾಂಕ: ೧೨/೦೯/೨೦೧೯ ರಂದು ಮದ್ಯಾಹ್ನ ೦೨.೦೦ ಗಂಟೆಯಿಂದ ದಿನಾಂಕ: ೧೩/೦೯/೨೦೧೯ ರಂದು ಮೆರವಣಿಗೆ ಮುಕ್ತಾಯದವರೆಗೆ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದ್ದು, ಪರ್ಯಾಯ ಮಾರ್ಗಗಳನ್ನು ಬಳಸಿಕೊಳ್ಳಲು ಕೋರಲಾಗಿದೆ.
೧) ಚನ್ನಮ್ಮಾ ಸರ್ಕಲ್ ಮಾರ್ಗವಾಗಿ ಕಾಲೇಜ್ ರಸ್ತೆ ಮುಖಾಂತರ ಖಾನಾಪೂರ ಕಡೆಗೆ ಸಾಗುವ ಎಲ್ಲ ಮಾದರಿಯ ವಾಹನಗಳ ಚಾಲಕ/ಸವಾರರು ಚನ್ನಮ್ಮಾ ಸರ್ಕಲ್ ಗಣೇಶ ಮಂದಿರ ಹಿಂದೆ ಬಲತಿರುವು ಪಡೆದುಕೊಂಡು ಕ್ಲಬ್ ರಸ್ತೆ ಮೂಲಕ, ಗಾಂಧಿ ಸರ್ಕಲ್ (ಅರಗನ ತಲಾಬ), ಶೌರ್ಯ ಚೌಕ (ಮಿಲ್ಟ್ರಿ ಆಸ್ಪತ್ರೆ ಸರ್ಕಲ್), ಕೇಂದ್ರೀಯ ವಿದ್ಯಾಲಯ ನಂ.೨, ಶರ್ಕತ ಪಾರ್ಕ, ಗ್ಲೋಬ್ ಥಿಯೇಟರ್ ಸರ್ಕಲ್ ಮೂಲಕ ಖಾನಾಪೂರ ರಸ್ತೆಗೆ ಸೇರಿ ಮುಂದೆ ಸಾಗುವುದು.
೨) ಜೀಜಾಮಾತಾ ಸರ್ಕಲ್ ದಿಂದ ದೇಶಪಾಂಡೆ ಪೆಟ್ರೋಲ್ ಪಂಪ್, ನರಗುಂದಕರ ಭಾವೆ ಚೌಕ/ಕಂಬಳಿ ಖೂಟ, ಪಿಂಪಳ ಕಟ್ಟಾ, ಪಾಟೀಲ ಗಲ್ಲಿ ಕಡೆಗೆ ಸಂಚರಿಸುವ ಎಲ್ಲ ಮಾದರಿಯ ವಾಹನಗಳು ಜೀಜಾ ಮಾತಾ ಸರ್ಕಲ್‌ದಿಂದ ನೇರವಾಗಿ ಹಳೇ ಪಿಬಿ ರಸ್ತೆಯ ಮೂಲಕ ಮುಂದೆ ಸಾಗುವುದು.
೩) ನಾಥಪೈ ಸರ್ಕಲ್ ಕಡೆಯಿಂದ ಬ್ಯಾಂಕ ಆಫ್ ಇಂಡಿಯಾ ಮಾರ್ಗವಾಗಿ ಕಪಿಲೇಶ್ವರ ರೇಲ್ವೆ ಓವರ್ ಬ್ರಿಡ್ಜ್ ಮುಖಾಂತರ ಸಂಚರಿಸುವ ಎಲ್ಲ ಮಾದರಿಯ ವಾಹನಗಳು ಎಸ್.ಪಿ.ಎಂ. ರಸ್ತೆ ಭಾತಕಾಂಡೆ ಸ್ಕೂಲ್ ಕ್ರಾಸ್‌ದಲ್ಲಿ ಬಲತಿರುವು ಪಡೆದುಕೊಂಡು ಕಪಿಲೇಶ್ವರ ಕಾಲನಿ ಮುಖಾಂತರ ವಿಆರ್‌ಎಲ್ ಲಾಜಿಸ್ಟಿಕ್ ಸೇರಿ ಮುಂದೆ ಸಾಗುವುದು.
೪) ಹಳೆ ಪಿಬಿ ರಸ್ತೆ, ವ್ಹಿ.ಆರ್.ಎಲ್ ಲಾಜಿಸ್ಟಿಕ್, ಭಾತಕಾಂಡೆ ಸ್ಕೂಲ್ ಮಾರ್ಗವಾಗಿ ಕಪಿಲೇಶ್ವರ ರೇಲ್ವೆ ಓವರ್ ಬ್ರಿಡ್ಜ್ ಮುಖಾಂತರ ಸಂಚರಿಸುವ ಎಲ್ಲ ಮಾದರಿಯ ವಾಹನಗಳು ಭಾತಕಾಂಡೆ ಸ್ಕೂಲ್ ಕ್ರಾಸ್ ಹತ್ತಿರ ಎಡತಿರುವ ಪಡೆದುಕೊಂಡು ಶಿವಾಜಿ ಗಾರ್ಡನ, ಬ್ಯಾಂಕ್ ಆಫ್ ಇಂಡಿಯಾ ಕ್ರಾಸ್, ಮಹಾತ್ಮಾ ಫುಲೆ ರಸ್ತೆ ಮಾರ್ಗವಾಗಿ ಮುಂದೆ ಸಾಗುವುದು.
೫) ಹಳೆ ಪಿಬಿ ರಸ್ತೆ, ಯಶ್ ಆಸ್ಪತ್ರೆ, ಮಹಾದ್ವಾರ ರಸ್ತೆ, ಕಪಿಲೇಶ್ವರ ಮಂದಿರ ಮೂಲಕ ರೇಲ್ವೆ ಅಂಡರ್ ಬ್ರಿಡ್ಜ್ ಕಡೆಗೆ ಸಾಗುವ ಎಲ್ಲ ಮಾದರಿಯ ವಾಹನಗಳು ಯಶ್ ಆಸ್ಪತ್ರೆ ಹತ್ತಿರ ಎಡ/ಬಲ ತಿರುವು ಪಡೆದುಕೊಂಡು ಭಾತಕಾಂಡೆ ಸ್ಕೂಲ್/ತಾನಾಜಿ ಗಲ್ಲಿ ರೇಲ್ವೆ ಗೇಟ ಮೂಲಕ ಮುಂದೆ ಸಾಗುವುದು.
೬) ಗೂಡ್ಸ್ ಶೆಡ್ ರಸ್ತೆ ಮೂಲಕ ಕಪಿಲೇಶ್ವರ ಓವರ್ ಬ್ರಿಡ್ಜ್ ಕಡೆಗೆ ಸಂಚರಿಸುವ ಎಲ್ಲ ಮಾದರಿಯ ವಾಹನಗಳು ಎಸ್.ಪಿ.ಎಂ. ರಸ್ತೆ ಕಡೆಗೆ ಸಂಚರಿಸದೇ ಮರಾಠಾ ಮಂದಿರ ಗೋವಾ ವೇಸ್ ಸರ್ಕಲ್ ಕಡೆಗೆ ಸಂಚರಿಸುವುದು.
೭) ಖಾನಾಪೂರ ರಸ್ತೆ, ಬಿಎಸ್‌ಎನ್‌ಎಲ್ ಕಛೇರಿ ಕ್ರಾಸ್, ಸ್ಟೇಶನ್ ರಸ್ತೆ ಹಾಗೂ ಗೋಗಟೆ ಸರ್ಕಲ್ ಕಡೆಯಿಂದ ರೇಲ್ವೆ ಸ್ಟೇಶನ, ಹೆಡ್ ಪೋಸ್ಟ್ ಆಫೀಸ್ ಸರ್ಕಲ್ ಮೂಲಕ ಶನಿ ಮಂದಿರ ಕಡೆಗೆ ಸಂಚರಿಸುವ ಎಲ್ಲ ಮಾದರಿ ವಾಹನಗಳು ಗ್ಲೋಬ್ ಸರ್ಕಲ್ ಹತ್ತಿರ ಎಡ ತಿರುವ ಪಡೆದುಕೊಂಡು, ಶರ್ಕತ ಪಾರ್ಕ, ಕೇಂದ್ರಿಯ ವಿದ್ಯಾಲಯ ನಂ.೨, ಶೌರ್ಯ ಚೌಕ (ಮಿಲ್ಟ್ರಿ ಆಸ್ಪತ್ರೆ ಸರ್ಕಲ್). ಗಾಂಧಿ ಸರ್ಕಲ್ (ಅರಗನ ತಲಾಬ), ಕ್ಲಬ್ ರಸ್ತೆ, ಚನ್ನಮ್ಮಾ ಸರ್ಕಲ್ ಸೇರಿ ಮುಂದೆ ಸಾಗುವುದು.
೮) ಮೆರವಣಿಗೆ ಮಾರ್ಗದಲ್ಲಿ ಎರಡು ಕ್ಯಾರೇಜ್ ವೇ ಇದ್ದ ಕಡೆ ಒಂದು ಮಾರ್ಗವನ್ನು ಹಾಗೂ ಒಂದು ಕ್ಯಾರೇಜ್ ವೇ ಇದ್ದ ರಸ್ತೆಯನ್ನು ಸಂಪೂರ್ಣವಾಗಿ ಮೆರವಣಿಗೆಗೆ ಉಪಯೋಗಿಸಲಾಗುತ್ತಿದೆ.
೯) ಮೆರವಣೆಗೆ ಸಾಗುವ ಮಾರ್ಗವಾದ ನರಗುಂದಕರ ಭಾವೆ ಚೌಕ, ಮಾರುತಿ ಗಲ್ಲಿ, ಹುತಾತ್ಮ ಚೌಕ, ರಾಮದೇವ ಗಲ್ಲಿ, ಸಮಾದೇವಿ ಗಲ್ಲಿ, ಕಾಲೇಜ ರಸ್ತೆ, ಧರ್ಮವೀರ ಸಂಭಾಜಿ ಚೌಕ, ರಾಮಲಿಂಗಖಿಂಡ ಗಲ್ಲಿ ರಸ್ತೆ, ಟಿಳಕಚೌಕ, ಹೇಮುಕಾಲನಿ ಚೌಕ(ಶಿವಭವನ), ಶನಿಮಂದಿರ, ಕಪಿಲೇಶ್ವರ ಓವರ ಬ್ರಿಡ್ಜ, ಕಪಿಲೇಶ್ವರ ಮಂದಿರದ ಎರಡೂ ಬದಿಯ ರಸ್ತೆಗಳಲ್ಲಿ, ಕ್ಯಾಂಪ ಪ್ರದೇಶ ವ್ಯಾಪ್ತಿಯ ಹ್ಯಾವಲಾಕ್ ರಸ್ತೆ, ಕ್ಯಾಟಲ್ ರಸ್ತೆ, ಯಂಡೇಖೂಟ ದಿಂದ ದೇಶಪಾಂಡೆ ಖೂಟವರೆಗೆ ಹಾಗೂ ಪವನ ಹೊಟೇಲ್ ವರೆಗಿನ ರಸ್ತೆಗಳಲ್ಲಿ ದಿನಾಂಕ:೧೨/೦೯/೨೦೧೯ ರಂದು ಮಧ್ಯಾಹ್ನ ೦೨.೦೦ ಗಂಟೆಯಿಂದ ಮೆರವಣಿಗೆ ಮುಕ್ತಾಯದವರೆಗೆ ಎಲ್ಲ ಮಾದರಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
ವಾಹನಗಳ ನಿಲುಗಡೆ
ಮೆರವಣಿಗೆ ವೀಕ್ಷಿಸಲು ಬರುವ ಸಾರ್ವಜನಿಕರ ವಾಹನಗಳ ನಿಲುಗಡೆ ಕುರಿತು ಗುರ್ತಿಸಲಾದ ಸ್ಥಳಗಳ ವಿವರ-
೧) ಬೆನನ್‌ಸ್ಮಿತ್ ಕಾಲೇಜ್ ಮೈದಾನ.
೨) ಬೋಗಾರವೇಸ್ ಸರ್ಕಲ್‌ದಿಂದ ದೇಶಪಾಂಡೆ ಖೂಟ ಕಡೆಗೆ ಸಾಗಿದ ವನಿತಾ ವಿದ್ಯಾಲಯ ಮುಂದಿನ ಬೋಳ ರಸ್ತೆ.
೩) ಧರ್ಮವೀರ ಸಂಭಾಜಿ (ಬೋಗಾರವೇಸ್) ಸರ್ಕಲ್ ಹತ್ತಿರದ ಶ್ರೀ ಲಿಂಗರಾಜ ಪಾಟೀಲ ರವರ ಖುಲ್ಲಾ ಜಾಗೆ.
೪) ಫಿಶ್ ಮಾರ್ಕೇಟ್ ದಿಂದ ಇಸ್ಲಾಮಿಯಾ ಸ್ಕೂಲ್ ಕಡೆಗೆ ಸಾಗಿದ ರಸ್ತೆಯ ಒಂದು ಬದಿಗೆ.
೫) ಮರಾಠಾ ವಿದ್ಯಾನಿಕೇತನ ಮೈದಾನ [ಬನ್ನಿ ಮಂಟಪ].
೬) ದೇಶಪಾಂಡೆ ಖೂಟ ದಿಂದ ಗಾಂಧಿ ಸರ್ಕಲ್ [ಅರಗನ ತಲಾಬ] ವರೆಗಿನ ರಸ್ತೆಯ ಒಂದು ಬದಿಗೆ.
೭) ಖಂಜರಗಲ್ಲಿ ಪಾರ್ಕಿಂಗ್.
೮) ಮಹಾದ್ವಾರ ರಸ್ತೆಯ ಸಂಭಾಜಿ ಉದ್ಯಾನವನ.
ಸಾರ್ವಜನಿಕರು ನಿಗಧಿಪಡಿಸಲಾದ ಸ್ಥಳಗಳಲ್ಲಿಯೇ ತಮ್ಮ ವಾಹನಗಳನ್ನು ನಿಲುಗಡೆ ಮಾಡುವಂತೆ ಪೊಲೀಸರು ಕೋರಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ