Belagavi NewsBelgaum NewsKarnataka News

*ಬೆಳಗಾವಿ ಗಣೇಶೋತ್ಸವ: ಅಪಾಯಕಾರಿ ವಿದ್ಯುತ್ ತಂತಿಗಳ ತೆರವು; ಮಾರ್ಗಗಳ ಎತ್ತರ ಹೆಚ್ಚಳ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗಣೇಶೋತ್ಸವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ನಗರದ ಹೆಸ್ಕಾಂ ಉಪ ವಿಭಾಗ-3 ರ ವ್ಯಾಪ್ತಿಯಲ್ಲಿ ಮೆರವಣಿಗೆ ಮಾರ್ಗದಲ್ಲಿನ ಅಪಾಯಕಾರಿ ವಿದ್ಯುತ್ ತಂತಿಗಳ ತೆರವು ಹಾಗೂ ಹೆಚ್.ಟಿ. ಮಾರ್ಗಗಳನ್ನು ಎತ್ತರಗೊಳಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.

ವಿಸರ್ಜನಾ ಹೊಂಡ ಹಾಗೂ ಮೆರವಣಿಗೆ ಮಾರ್ಗಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ ಅಗತ್ಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿರುತ್ತದೆ. ಈ ಉಪ ವಿಭಾಗದ ವ್ಯಾಪ್ತಿಯ 74 ಗಣೇಶ ಪೆಂಡಾಲ್ ಸ್ಥಳಗಳಿಗೆ ಭೇಟಿ ನೀಡಿರುವ ಹೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ವಿದ್ಯುತ್ ಪರಿವರ್ತಕಗಳನ್ನು ಪರಿಶೀಲಿಸಿದ್ದಾರೆ.

ವಿದ್ಯುತ್ ಪರಿವರ್ತಕಗಳ ನಿರ್ವಹಣೆ ಹಾಗೂ ದುರಸ್ತಿ ಇರುವ ಪರಿವರ್ತಕಗಳ ವೈರಿಂಗ್ ಕೆಲಸ ಮಾಡಲಾಗಿದ್ದು, ವೈರ್ ಗೆ ತಗಲುವ ಮರ/ಗಿಡಗಳ ಕೊಂಬೆಗಳನ್ನು ಕೂಡ ಕತ್ತರಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಅಪಾಯಕಾರಿ ಸ್ಥಳಗಳಲ್ಲಿ ಇರುವಂತಹ ಎಲ್‌ಟಿ ಓವರ್ ಹೆಡ್ ಇದ್ದಂತಹ ಲೈನ್ ತೆಗೆದು ಎಲ್ ಟಿ ಎಬಿ ಕೇಬಲ್ ಅಳವಡಿಸಲಾಗಿದೆ. ಹೆಸ್ಕಾಂ (ಕಾರ್ಯ ಮತ್ತು ಪಾಲನಾ) ನಗರ ಉಪ ವಿಭಾಗ‌-3 ರ ವ್ಯಾಪ್ತಿಯಲ್ಲಿ ಸಹಾಯಕ ಎಂಜಿನಿಯರ್ ಅವರ ಉಸ್ತುವಾರಿಯಲ್ಲಿ ಅನುಸರಿಸಲಾದ ಸುರಕ್ಷತಾ ಕ್ರಮಗಳನ್ನು ಎಲ್ಲೆಡೆಗೆ ತೆಗೆದುಕೊಳ್ಳಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದ್ದಾರೆ.

ಗಣೇಶೋತ್ಸವ ಸಂದರ್ಭದಲ್ಲಿ ಯಾವುದೇ ರೀತಿ ಲಯ ಅನಾನುಕೂಲ ಅಥವಾ ಅಪಾಯ ಉಂಟಾಗದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಅಪಾಯಕಾರಿ ವಿದ್ಯುತ್ ತಂತಿ, ಕಂಬಗಳು ಅಥವಾ ಪರಿವರ್ತಕಗಳು ಕಂಡುಬಂದರೆ ಸಾರ್ವಜನಿಕರು ಕೂಡಲೇ ಸಂಬಂಧಿಸಿದ ಹೆಸ್ಕಾಂ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು‌ ಅವರು ಮನವಿ ಮಾಡಿಕೊಂಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button