Belagavi NewsBelgaum News

*ಹಲಾಲ ಮುಕ್ತ ಗಣೇಶೋತ್ಸವ ಆಚರಣೆಗೆ ಪ್ರಮೋದ್ ಮುತಾಲಿಕ್ ಕರೆ*

ಪ್ರಗತಿವಾಹಿನಿ ಸುದ್ದಿ: ಹಲಾಲ್ ಕ್ಕಿಂತ ದೊಡ್ಡ ಡೆಂಜರ್ ಚೀನಾ ವಸ್ತುಗಳು ಅವುಗಳನ್ನು ಜನರು ಬ್ಯಾನ್ ಮಾಡಬೇಕು ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ ಹೇಳಿದರು.


ಸೋಮವಾರ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹಲಾಲ ಮುಕ್ತ ಗಣೇಶೋತ್ಸವ ಆಚರಣೆ ಮಾಡುವಂತೆ ಜಾಗೃತಿ ಮೂಡಿಸುತ್ತಿದ್ದೇವೆ. ಗಣೇಶ ಹಬ್ಬದಲ್ಲಿ ಹಲಾಲ್ ಸಂಬಂಧಿಸಿದ ಹೂವು, ಹಣ್ಣು, ಕಾಯಿ ಸೇರಿದಂತೆ ಇನ್ನಿತರ ವಸ್ತುಗಳನ್ನು ಹಲಾಲ್ ಕಟ್ ಮಾಡುವವರ ಕಡೆಯಿಂದ ಖರೀದಿಸಬಾರದು ಎಂದರು.


ಗೋ ಹಂತಕರು, ಗೋ ಭಕ್ಷಕರಿಂದಲೂ ಮಾರಾಟ ಮಾಡುವ ವಸ್ತು ಅಪವಿತ್ರವಾಗಿರುತ್ತದೆ. ದೇವಸ್ಥಾನದ ಸುತ್ತಮುತ್ತಲಿನ ಕಡೆ ಮುಸ್ಲಿಮರು ವ್ಯಾಪಾರ ನಡೆಸಿ ದೇವಸ್ಥಾನವನ್ನು ಧ್ವಂಸ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ಹೈದರಾಬಾದ್ ನಲ್ಲಿ 16 ದೇವಸ್ಥಾನದಗಳನ್ನು ಧ್ವಂಸ ಮಾಡಿದ್ದಾರೆ. ಹಲಾಲ್ ಮಾಡು

ಬಾಂಗ್ಲಾದೇಶದಲ್ಲಿ ಇಲ್ಲಿಯವರೆಗೂ ಹಿಂದುಗಳ ಮೇಲೆ ದೌರ್ಜನ್ಯ ಮಾಡುವುದನ್ನು ನಿಲ್ಲಿಸಿಲ್ಲ. 40 ಹಿಂದು ಶಿಕ್ಷಕರಿಂದ ಒತ್ತಾಯ ಪೂರ್ವಕವಾಗಿ ರಾಜೀನಾಮೆ ಪಡೆದು ಶಾಲಾ, ಕಾಲೇಜಿಗೆ ನುಗ್ಗಿ ಹಲ್ಲೆ ನಡೆಸುತ್ತಿದ್ದಾರೆ. ಹಿಂದು ಸಮಾಜವನ್ನು ಕೆಣಕುತ್ತಿರುವ ಪುಟಗೋಸಿ ಬಾಂಗ್ಲಾದೇಶ ಗೆ ತಕ್ಕ ಉತ್ತರ ಕೊಡಬೇಕಿದ್ದ ಕೇಂದ್ರ ಸರಕಾರ ಯಾಕೆ ಬಾಂಗ್ಲಾದೇಶದ ಹಿಂದುಗಳಿಗೆ ರಕ್ಷಣೆ ಕೊಡುತ್ತಿಲ್ಲ. ಯಾಕೆ ಪ್ರಧಾನಿ ನರೇಂದ್ರ ‌ಮೋದಿ ಮೌನವಹಿಸಿದ್ದಾರೆ ಏಕೆ ಎಂದು ಪ್ರಶ್ನಿಸಿದರು.

ಬಾಂಗ್ಲಾದೇಶದ ಪ್ರಧಾನಿ ಫಸೀನಾಗೆ ರಕ್ಷಣೆ ಕೊಡುವ ಕೇಂದ್ರ ಸರಕಾರ ಬಾಂಗ್ಲಾದೇಶದ ಹಿಂದುಗಳ ರಕ್ಷಣೆ ‌ಮಾಡುತ್ತಿಲ್ಲ. ಇಂದಿರಾಗಾಂಧಿಯವರು 1971ರಲ್ಲಿ ನಡೆಸಿದ ಯುದ್ಧದ ಮಾದರಿಯಲ್ಲಿ ಬಾಂಗ್ಲಾದೇಶದ ಮೇಲೆ ಕೇಂದ್ರ ಸರಕಾರ ನಡೆಸಬೇಕು. ಕೇಂದ್ರ ಸರಕಾರದ ಮಾಹಿತಿ ಪ್ರಕಾರ 5 ಕೋಟಿ ಬಾಂಗ್ಲಾ ನುಸುಳುಕೋರರು ಇದ್ದಾರೆ. ಕರ್ನಾಟಕದಲ್ಲಿ 12 ಲಕ್ಷ ಜನರು ಬಾಂಗ್ಲಾದೇಶದ ನುಸುಳಿಕೋರರು ಇದ್ದಾರೆ ಅವರನ್ನು ಒದ್ದು ಹೋರಗೆ ಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ದೇಶದ್ರೋಹಿ ಕ್ಯಾನ್ಸರ್ ಇದ್ದ ಹಾಗೆ. ಇವರನ್ನು ಈಗಲೇ ಹೊಸುಕಿ ಹಾಕಿ ಎಂದರು.

ಮಹಾರಾಷ್ಟ್ರದ ಜಳಗಾವದಲ್ಲಿ ರಾಮಗೀರಿ ಮಹಾರಾಜರು ತಮ್ಮ ಪ್ರವಚನದಲ್ಲಿ‌ ಮೊಹಮ್ಮದ್ ಪೈಗಂಬರ್ ಬಗ್ಗೆ ಪ್ರಸ್ತಾಪಿಸಿದರು. ಆದರೆ ಅವರ ವಿರುದ್ದ ಸರತನ್ ಸೇ ಜುದಾ ಅಂತಾರೆ. ಇದೇನು ಪಾಕಿಸ್ತಾನವಾ ಎಂದು ಪ್ರಶ್ನಿಸಿದ ಅವರು, ರಾಮಗೀರಿ ಮಹಾರಾಜರ ಪರವಾಗಿ ಶ್ರೀರಾಮ ಸೇನೆ ನಿಲ್ಲುತ್ತದೆ ಎಂದರು.


ರಾಜ್ಯದಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ಹಿಂದು ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿರುವುದನ್ನು ಹಿಂಪಡೆಯಬೇಕಿತ್ತು. ಆದರೆ ಇವರಿಗೆ ಚುನಾವಣೆಯಲ್ಲಿ ಮಾತ್ರ ಹಿಂದುಗಳು ನೆನಪಾಗುತ್ತಾರೆ‌. ಬಿಜೆಪಿ ಹುಟ್ಟಿದ್ದೇ ಜನಸಂಗ ಹಿಂದು ಸಂಘಟನೆಯಿಂದ ಇದನ್ನು ನೆನೆಪಿನಲ್ಲಿಟ್ಟುಕೊಳ್ಳಬೇಕು ಎಂದರು.


ಶ್ರೀರಾಮ ಸೇನಾ ಮುಖಂಡರಾದ ರವಿ ಕೋಕಿತ್ಕರ್, ವಿನಯ ಅಂಗ್ರೋಳಿ, ವಿಠ್ಠಲ ಗಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button